ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

0

ಬೆಳ್ತಂಗಡಿ: ಲಯನ್ಸ್ ಕ್ಲಬ್ ವತಿಯಿಂದ ಎಕ್ಸೆಲ್ ಪದವಿಪೂರ್ವ ಕಾಲೇಜು ಗುರುವಾಯನಕೆರೆ ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಕ್ಸೆಲ್ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ನೆರವೇರಿಸಿದರು.

ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷ ಲಯನ್ ಮುರಳಿ ಬಲಿಪ ವಹಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಮಂಜುನಾಥ ನಾಯ್ಕ ಅವರನ್ನು ಗೌರವಿಸಲಾಯಿತು. ಬೆಳ್ತಂಗಡಿ ಲಯನ್ಸ್ ಕ್ಲಬ್ ಸೇವಾ ಆಂದೋಲನದಲ್ಲಿ ಸಕ್ರಿಯರಾಗಿರುವ ನಿವೃತ್ತ ಸೈನಿಕರುಗಳಾದ ಲಯನ್ ಗೋಪಾಲಕೃಷ್ಣ ಕಾಂಚೋಡು, ಲಯನ್ ಎನ್.ಪಿ. ತಂಗಚ್ಚನ್, ಲಯನ್ ಮೋಹನ್ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಎಕ್ಸೆಲ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ| ನವೀನ್ ಕುಮಾರ್ ಮರಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಲಯನ್ ಸದಸ್ಯರುಗಳಾದ ರಾಮಕೃಷ್ಣ ಗೌಡ, ಉಮೇಶ ಶೆಟ್ಟಿ, ಸುಶೀಲ ಎಸ್. ಹೆಗ್ಡೆ, ಸುರೇಶ ಶೆಟ್ಟಿ ಲ್ಯಾಲ, ದತ್ತಾತ್ರಯ ಗೊಲ್ಲ, ಅನಂತಕೃಷ್ಣ, ಪಂಚಾಕ್ಷರಪ್ಪ, ಪ್ರವೀಣ್ ಹೆಚ್,ಎಸ್., ರಮೇಶ್, ಹನುಮಂತರಾಯ, ಹೇಮಲತಾ, ಲಿಯೋ ಆಧ್ಯಕ್ಷೆ ಡಾ| ಭಾಷಿಣಿ, ಲಿಯೋ ಕಾರ್ಯದರ್ಶಿ ದೀಕ್ಷಿತ್ ಲಯನ್ಸ್, ಹಾಗೂ ಲಿಯೋ ಸದಸ್ಯರು ಸಹಕರಿಸಿದರು. ಎಕ್ಸೆಲ್ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.

ಬೆಳ್ತಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಯನ್ ಅಮಿತಾನಂದ ಹೆಗ್ಡೆ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಲಯನ್ ವಸಂತ ಶೆಟ್ಟಿ ಶ್ರದ್ಧಾ ನಿರ್ವಹಿಸಿದರು. ಪೂರ್ವಾಧ್ಯಕ್ಷ ಲಯನ್ ನಿತ್ಯಾನಂದ ನಾವರ ವಂದಿಸಿದರು.

LEAVE A REPLY

Please enter your comment!
Please enter your name here