ಕೊಕ್ಕಡ: ಶಿಶಿಲ ಭಾಗದಲ್ಲಿ ಭಾರಿ ಗಾಳಿ ಮಳೆ-ಪೇರಿಕೆಯಲ್ಲಿ ನೆಲಕ್ಕುರುಳಿದ 7 ಕರೆಂಟ್ ಕಂಬಗಳು

0

ಕೊಕ್ಕಡ: ಶಿಶಿಲ- ಶಿಬಾಜೆ -ಅರಸಿನಮಕ್ಕಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಗಾಳಿ ಬೀಸಿ ಮಳೆ ಸುರಿಯುತ್ತಿದ್ದು ಜು. 27ರಂದು ಸಂಜೆ ಬೀಸಿದ ಗಾಳಿಯ ರಭಸಕ್ಕೆ ಶಿಶಿಲದ ಪೇರಿಕೆ ಯಲ್ಲಿ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು7 ಕಂಬಗಳು ನೆಲಕಚ್ಚಿದೆ.

ಮೆಸ್ಕಾಂ ಇಲಾಖೆಯವರು ಗ್ರಾಹಕರಿಗೆ ವಿದ್ಯುತ್ ನೀಡಲು ಹರಸಾಹಸ ಪಡುತ್ತಿದ್ದಾರೆ. ಈ ಭಾಗದಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸಲು ಮೆಸ್ಕಾಂ ಇಲಾಖೆಯವರು ಸ್ಥಳೀಯರ ಮತ್ತು ಶೌರ್ಯ ವಿಪತ್ತು ತಂಡದವರ ಮೊರೆ ಹೋಗಿದ್ದು, ಶೌರ್ಯ ವಿಪತ್ತು ತಂಡದವರು ತಕ್ಷಣ ಸ್ಪಂದಿಸಿ ಮರಗಳನ್ನು ತೆರವು ಮಾಡಿದ್ದಾರೆ. ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷ ಸುಧೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here