ಕೊಕ್ರಾಡಿ ಹಾಗೂ ಕುತ್ಲೂರು ಸಂಪರ್ಕ ಸೇತುವೆ ಸರಿಪಡಿಸುವಂತೆ ಗ್ರಾಮಸ್ಥರ ಪ್ರತಿಭಟನೆ

0

ಬೆಳ್ತಂಗಡಿ: ತಾಲೂಕಿನ ಅಂಡಿಂಜೆ ಹಾಗೂ ನಾರಾವಿ ಎರಡೂ ಪಂಚಾಯತ್ ಗೆ ಸೇರುವ ಕೊಕ್ರಾಡಿ ಹಾಗೂ ಕುತ್ಲೂರು ಸಂಪರ್ಕ ಸೇತುವೆ ಸರಿಪಡಿಸುವಂತೆ ಗ್ರಾಮಸ್ಥರು ಜು.27 ರಂದು ಕೊಕ್ರಾಡಿ ಸೇತುವೆ ಬಳಿ ಪ್ರತಿಭಟನೆ ಮಾಡಿದರು.

ಬಳಿಕ ಮಾತನಾಡಿದ ಅಂಡಿಂಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸೂರ್ಯ ನಾರಾಯಣ ಸೇತುವೆ ಮುರಿದು ಒಂದು ವರ್ಷವಾಗಿದೆ. ಗ್ರಾಮಸ್ಥರಿಗೆ ಹೋಗಲು ತುಂಬಾ ಕಷ್ಟವಾಗುತ್ತಿದೆ. ಸಂಬಂಧ ಪಟ್ಟ ಅಧಿಕಾರಿಗಳಿಗೆ ಹೇಳಿದರು ಯಾವುದೇ ರೀತಿಯ ಸ್ಪಂದನೆ ಇಲ್ಲ. ತಕ್ಷಣ ಸೇತುವೆ ನಿರ್ಮಾಣ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.

ನಾರಾವಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶೇಖರ್ ಕುತ್ಲೂರು, ಅಂಡಿಂಜೆ ಕಾಂಗ್ರೆಸ್ ವಲಯದ ಯುವ ಅಧ್ಯಕ್ಷ ದೀಪಕ್ ಶೆಟ್ಟಿ, ಪದ್ಮಯ್ಯ, ಕೃಷ್ಣಪ್ಪ ಪೂಜಾರಿ, ಕೊಕ್ರಾಡಿ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಸುರೇಂದ್ರ ಕೊಟ್ಯಾನ್, ರಮೇಶ್, ಚಂದ್ರಶೇಖರ್, ಹರೀಶ್ ಕುಮಾರ್, ಪಾರ್ಶ್ವನಾಥ ಸಾಲಿಯುರ್ ಗುತ್ತು ಕೊಕ್ರಾಡಿ, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here