
ಬೆಳ್ತಂಗಡಿ: ತಾಲೂಕಿನ ಅಂಡಿಂಜೆ ಹಾಗೂ ನಾರಾವಿ ಎರಡೂ ಪಂಚಾಯತ್ ಗೆ ಸೇರುವ ಕೊಕ್ರಾಡಿ ಹಾಗೂ ಕುತ್ಲೂರು ಸಂಪರ್ಕ ಸೇತುವೆ ಸರಿಪಡಿಸುವಂತೆ ಗ್ರಾಮಸ್ಥರು ಜು.27 ರಂದು ಕೊಕ್ರಾಡಿ ಸೇತುವೆ ಬಳಿ ಪ್ರತಿಭಟನೆ ಮಾಡಿದರು.
ಬಳಿಕ ಮಾತನಾಡಿದ ನಾರಾವಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸೂರ್ಯ ನಾರಾಯಣ ಸೇತುವೆ ಮುರಿದು ಒಂದು ವರ್ಷವಾಗಿದೆ. ಗ್ರಾಮಸ್ಥರಿಗೆ ಹೋಗಲು ತುಂಬಾ ಕಷ್ಟವಾಗುತ್ತಿದೆ. ಸಂಬಂಧ ಪಟ್ಟ ಅಧಿಕಾರಿಗಳಿಗೆ ಹೇಳಿದರು ಯಾವುದೇ ರೀತಿಯ ಸ್ಪಂದನೆ ಇಲ್ಲ. ತಕ್ಷಣ ಸೇತುವೆ ನಿರ್ಮಾಣ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.
ನಾರಾವಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶೇಖರ್ ಕುತ್ಲೂರು, ಗ್ರಾಮಸ್ಥರಾದ ದೀಪಕ್ ಶೆಟ್ಟಿ, ಪದ್ಮಯ್ಯ, ಕೃಷ್ಣಪ್ಪ ಪೂಜಾರಿ, ಸುಂದರ್ ಕೊಟ್ಯಾನ್, ರಮೇಶ್, ಚಂದ್ರಶೇಖರ್, ಹರೀಶ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.