ಬೆಳ್ತಂಗಡಿಯಲ್ಲಿ ಕಲರವ ಮಕ್ಕಳ ಅಭಿವೃದ್ಧಿ ಕೇಂದ್ರ ಉದ್ಘಾಟನೆ

0

ಬೆಳ್ತಂಗಡಿ: ಸಂತೆಕಟ್ಟೆ ಬಳಿ ಇರುವ ಸುವರ್ಣ ಅರ್ಕೆಡ್ ನಲ್ಲಿ ಡಾ.ಶಿಲ್ಪ ಶೆಟ್ಟಿ ಮಾಲಿಕತ್ವದ ಮಕ್ಕಳ ಅಭಿವೃದ್ಧಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮ ಜು.27ರಂದು ನಡೆಯಿತು.
ಬೆಳ್ತಂಗಡಿ ತಾಲೂಕಿನ ವೈದ್ಯರಾದ ಡಾ.ಶ್ರೀನಿವಾಸ್ ಡೋಂಗ್ರೆ ನೂತನ ಕಲರವ ಸೆಂಟರನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಪ್ರಸಿದ್ದ ಎಲುಬು ತಜ್ಞ ಡಾ‌.ಶಶಿಕಾಂತ್ ಡೋಂಗ್ರೆ, ಗಜಾನನ ಹೆಗ್ಡೆ ಹುಬ್ಬಳ್ಳಿ, ಜಯಲಕ್ಷ್ಮಿ ಹೆಗ್ಡೆ ಹುಬ್ಬಳ್ಳಿ, ಡಾ.ಶಶಿಧರ ಡೋಂಗ್ರೆ, ಡಾ.ಸುಷ್ಮಾ ಡೋಂಗ್ರೆ, ಡಾ.ರಂಜನ್ ಕುಮಾರ್, ನರೇಂದ್ರ ತುಳುಪುಳೆ, ಯಶವಂತ ಪಟವರ್ಧನ್, ಸಚಿನ್ ಭಿಡೆ, ಮತ್ತಿತರರು ಉಪಸ್ಥಿತರಿದ್ದರು.

ಅಳದಂಗಡಿಯ ವೈದ್ಯರಾದ ಡಾ.ಎನ್.ಎಮ್. ತುಳುಪುಳೆ, ಗೀತಾ ತುಳುಪುಳೆ, ಇ.ಎನ್.ಟಿ ಸ್ಪೆಷಲಿಸ್ಟ್ ಡಾ.ಹರ್ಷ ತುಳುಪುಳೆ, ಡಾ.ಶಿಲ್ಪ ಶೆಟ್ಟಿ ಅವರು ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು.

LEAVE A REPLY

Please enter your comment!
Please enter your name here