
ಬೆಳ್ತಂಗಡಿ: ಅಧ್ಯಕ್ಷರಾಗಿ ಪದ್ಮನಾಭ ಮಾಣಿಂಜ ಅವರು ಮೃತಪಟ್ಟಿರುವುದರಿಂದ ತೆರವುಗೊಂಡಿರುವ ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜು.27ರಂದು ಚುನಾವಣೆ ನಡೆದಿದ್ದು, ಈ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಭಗೀರಥ ಜಿ ರವರು ಮತ್ತು ಉಪಾಧ್ಯಕ್ಷರಾಗಿ ಜಗದೀಶ್ಚಂದ್ರ ಡಿ.ಕೆ ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಈ ಚುನಾವಣೆ ಪ್ರಕ್ರಿಯೆಯನ್ನು ಬೆಳ್ತಂಗಡಿ ತಾಲೂಕು ಸಹಕಾರ ಸಂಘಗಳ ಸಹಕಾರ ಅಭಿವೃದ್ಧಿ ಅಧಿಕಾರಿಯಾದ ಬಿ.ವಿ.ಪ್ರತಿಮಾ ರವರು ನಡೆಸಿಕೊಟ್ಟರು. ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾದ ತನುಜಾ ಶೇಖರ್, ಚಂದ್ರಶೇಖರ್, ಸಂಜೀವ ಪೂಜಾರಿ, ಕೆ.ಪಿ. ದಿವಾಕರ, ಧರ್ಣಪ್ಪ ಪೂಜಾರಿ, ಧರಣೇಂದ್ರ ಕುಮಾರ್, ಜಯವಿಕ್ರಮ್ ಪಿ., ಆನಂದ ಪೂಜಾರಿ, ಡಾ.ರಾಜಾರಾಮ ಕೆ.ಬಿ., ಗಂಗಾಧರ ಮಿತ್ತಮಾರ್, ರಕ್ಷಿತ್ ಶಿವರಾಮ್, ಚಿದಾನಂದ ಪೂಜಾರಿ, ಸೂರಜ್ ಕುಮಾರ್, ವಿಶೇಷಾಧಿಕಾರಿ ಮೋನಪ್ಪ ಪೂಜಾರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಶ್ವಥ್ ಕುಮಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.