ಎಸ್.ಪಿ.ವೈ.ಎಸ್.ಎಸ್ ನಿಂದ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರರಿಗೆ ನುಡಿನಮನ

0


ಗೇರುಕಟ್ಟೆ: ಕಳಿಯ ಕ್ಷೀರ ಸಂಗಮ ಸಭಾಭವನದಲ್ಲಿ ನಡೆಯುತ್ತಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಮುಖ್ಯ ಶಿಕ್ಷಕಿ ಪ್ರೇಮಲತ ಅವರ ನೇತೃತ್ವದಲ್ಲಿ 1999ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಹುತಾತ್ಮರಾದ ವೀರ ಸೈನಿಕರಿಗೆ ನುಡಿ ನಮನ ಸಲ್ಲಿಸಲಾಯಿತು.

ಬೆಳಿಗ್ಗೆ 5ಗಂಟೆಗೆ ಎಲ್ಲರೂ ಸಾಮೂಹಿಕವಾಗಿ ಹನುಮಾನ್ ಚಾಲೀಸಾ ಪಠಣ ಮಾಡುವುದರೊಂದಿಗೆ ಅಮೃತ ವಚನ, ಪಂಚಾಂಗ ಪಠಣ, ಮಾನಸಿಕ ಸಿದ್ಧತೆ ನಡೆದು ಉಸಿರಾಟ ಕ್ರಿಯೆ ಹಾಗೂ ಕ್ರಿಯಾತ್ಮಕ ಚಾಲನೆ, ನಿಂತಲ್ಲೆ ಓಟ, ಯೋಗ ವ್ಯಾಯಾಮ ನಡೆಯಿತು.

ಮಕ್ಕಳಿಗೆ ಧರ್ಮ ಶಿಕ್ಷಣ ಅಗತ್ಯ: ಮುಖ್ಯ ಶಿಕ್ಷಕಿ ಪ್ರೇಮಲತ ಮಾತನಾಡಿ ಅಂದಿನ 1999ರ ಘಟನೆಯನ್ನು ಮೆಲುಕು ಹಾಕಿದರು. ನಮ್ಮ ಸೈನಿಕರಿಗೆ ನಾವು ಗೌರವವನ್ನು ಕೊಡಬೇಕು. ನಮ್ಮ ಧರ್ಮದ ಪಾಲನೆಯನ್ನು ಕಟ್ಟುನಿಟ್ಟಾಗಿ ಮಾಡಬೇಕು, ಸಣ್ಣ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ಧಾರ್ಮಿಕ ವಿದ್ಯೆ ಬೋದಿಸಬೇಕು ಎಂದರು.

ಆಪರೇಷನ್ ವಿಜಯ: ಸತೀಶ ಭಂಡಾರಿ ನಾಳ ಮಾತನಾಡಿ 1998ರಲ್ಲಿ ಭಾರತ-ಪಾಕಿಸ್ತಾನ ಎರಡು ದೇಶಗಳು ಅಣುಬಾಂಬ್ ಪರೀಕ್ಷೆ ನಡಿಸುವಾಗ ಜಗತ್ತಿನಲ್ಲಿ ಎಲ್ಲಾ ದೇಶಗಳಿಗೆ ಆಶ್ಚರ್ಯ ಆಯಿತು ಇನ್ನೇನು ಎರಡು ದೇಶಗಳು ಯುದ್ಧ ಮಾಡುತ್ತವೆ ಎಂದು, ಆದ್ರೆ1998 ಅಕ್ಟೋಬರ್ 15ನೇ ದಿನ ನಮ್ಮ ದೇಶದ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಆಗಿನ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅಮೇರಿಕಾದ ನ್ಯೂಯರ್ಕ್ ನಲ್ಲಿ ಪರಸ್ಪರ ಭೇಟಿಯಾಗಿ ದಿಲ್ಲಿ-ಲಾಹೂರು ಬಸ್ಸು ಚಾಲನೆ ಬಗ್ಗೆ ಮಾತನಾಡಿ ಕೊಂಡರು ಹಾಗೂ 1999ಪೆಬ್ರವರಿಯಲ್ಲಿ ಬಸ್ ಚಾಲನೆಗೊಂಡು ವಾಜಪೇಯಿಯವರು ಅದೇ ಬಸ್ಸಿನಲ್ಲಿ ಲಾಹೂರುಗೆ ಹೋದ ಬಗ್ಗೆ ನೆನಪಿಸಿ ನಂತರ ಪಾಕಿಸ್ತಾನ ಕಾಲು ಕೆದಕಿಕೊಂಡು ಗಡಿ ರೇಖೆಯಲ್ಲಿ ಆ ದೇಶದ ಸೈನಿಕರು ನಮ್ಮ ದೇಶದ ಗಡಿ ದಾಟಲು ಪ್ರಯತ್ನ ಮಾಡಿ ಕುರಿ ದಾಹಿಗಳು ಅದನ್ನ ನೋಡಿ ನಮ್ಮ ಸೈನಿಕರಲ್ಲಿ ತಿಳಿಸಿದಾಗ ನಮ್ಮ ಸೈನಿಕರು ಅವರನ್ನು ಹಿಮ್ಮೆಟ್ಟುವಾಗ ಯುದ್ಧ ಪ್ರಾರಂಭ ಆಗಿ ಪಾಕಿಸ್ತಾನದ 2000ಕ್ಕೂ ಅಧಿಕ ಸೈನಿಕರನ್ನು ಕೊಲ್ಲಲಾಯಿತು ನಂತರ ಕೊನೆಗೆ ಭಾರತಕ್ಕೆ ಜಯ ಸಿಕ್ಕಿ ಆಪರೇಷನ್ ವಿಜಯ ಆಗಿದ್ದು ಜುಲೈ 26, 1999 ಅವತ್ತು 527ಜನ ನಮ್ಮ ಸೈನಿಕರನ್ನು ಕಳೆದುಕೊಂಡ ಘಟನೆ ನಡೆದು ಇವತ್ತು ಅಂದರೆ ಜು. 26ಕ್ಕೆ 26ವರ್ಷ ಎಂದು ಸವಿವಾರವಾಗಿ ವಿಸ್ತರಣೆ ಮಾಡಿ ಹೇಳಿದರು.

ನಂತರ ಎಲ್ಲರೂ ಭಾರತ ಮಾತೆಗೆ ಪುಷ್ಪ ಅರ್ಚನೆ ಮಾಡಿ ಒಂದೊಂದು ಹಣತೆ ಬೆಳಗಿಸಿದರು. ಹಾಗೂ ಯೋಗ ವ್ಯಾಯಾಮ ಪ್ರಾತ್ಯಾಕ್ಷಿಕೆ ನಡೆಯಿತು. ಉಪ ಶಿಕ್ಷಕ ಸುಕೇಶ್ ನಾಯ್ಕ್, ಸಂಚಾಲಕರು ವಿಜಯ ಗೌಡ ಕಲಾಯಿತೊಟ್ಟು, ನಿತ್ಯ ಯೋಗ ವರದಿಗಾರ ಕೇಶವ ಪೂಜಾರಿ ಗೇರುಕಟ್ಟೆ, ಹಿರಿಯರಾದ ದಿವಾಕರ ಆಚಾರ್ಯ ಗೇರುಕಟ್ಟೆ ಹಾಗೂ ಯೋಗ ಬಂಧುಗಳು ಪಾಲ್ಗೊಂಡಿದ್ದರು. ಕೊನೆಗೆ ಲೋಕಕಲ್ಯಾಣ ಮಂತ್ರ ಎಲ್ಲರೂ ಒಟ್ಟಾಗಿ ಪಠಿಸಿದರು. ಶಿವಣ್ಣ ಆಚಾರ್ಯ ಧನ್ಯವಾದಗೈದರು.

LEAVE A REPLY

Please enter your comment!
Please enter your name here