
ಕಕ್ಕಿಂಜೆ: ಶ್ರೀ ಕೃಷ್ಣ ಆಸ್ಪತ್ರೆಗೆ ನಾರ್ಥ್ ಕೆರೊಲಿನಾ ವೈದ್ಯಕೀಯ ವಿದ್ಯಾರ್ಥಿಗಳ ತಂಡವು ಯೇನೆಪೊಯ ದಂತ ವೈದ್ಯಕೀಯ ಕಾಲೇಜು ದೇರಳಕಟ್ಟೆ ಮಂಗಳೂರು ಅವರ ಸಹಕಾರದೊಂದಿಗೆ ಜು.25ರಂದು ಭೇಟಿ ನೀಡಿದರು. ಹಾಗೂ ಗ್ರಾಮೀಣ ಪ್ರದೇಶದ ವೈದ್ಯಕೀಯ ಸೇವೆ ಎದುರಿಸುವ ಸವಾಲುಗಳು ಮತ್ತು ಶ್ರೀ ಕೃಷ್ಣ “ಯೋಗಕ್ಷೇಮ” (ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ) ಇದರ ಬಗ್ಗೆ ಚರ್ಚಿಸಿದರು. ಮತ್ತು ಗ್ರಾಮೀಣ ಪ್ರದೇಶದ ಆರೋಗ್ಯ ಸೇವೆಯ ಬಗ್ಗೆ ಮಾಹಿತಿ ಪಡೆದರು.

ಆಸ್ಪತ್ರೆಯ ಸೇವಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವೈದ್ಯಕೀಯ ನಿರ್ದೇಶಕ ಡಾ.ಮುರಳಿಕೃಷ್ಣ ಇರ್ವತ್ರಾಯ ಮಾತನಾಡಿ ನಗರ ಪ್ರದೇಶಗಳಲ್ಲಿ ಸೌಲಭ್ಯಗಳ ಲಭ್ಯತೆ ಹೆಚ್ಚು ಇದ್ದು ಯಾವುದೇ ರೀತಿಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದು. ಆದರೆ ಹಳ್ಳಿ ಪ್ರದೇಶಗಳಲ್ಲಿ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ನಿಭಾಯಿಸಲು ಕಷ್ಚಟಕರವಾಗಿದ್ದು, ಮತ್ತು ವೈದ್ಯಕೀಯ ಸಿಬ್ಬಂದಿಗಳ ಕೊರತೆ ಇತರ ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೆಶಕ ಡಾ.ಮುರಳಿಕೃಷ್ಣ ಇರ್ವತ್ರಾಯ, ವೈದ್ಯಕೀಯ ಅಧೀಕ್ಷಕಿ ಡಾ.ವಂದನಾ ಎಂ ಇರ್ವತ್ರಾಯ, ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಅಲ್ಬಿನ್ ಜೋಸೆಫ್, ವೈದ್ಯಾಧಿಕಾರಿಗಳಾದ ಡಾ.ಮೌಲ್ಯ, ಡಾ.ಶಾರೂನ್, ದಂತ ವೈದ್ಯಾಧಿಕಾರಿ ಡಾ.ಮಹಮ್ಮದ್ ಮಿಫ್ರಾ,ಆಡಳಿತಾಧಿಕಾರಿ ಜ್ಯೋತಿ ವಿ. ಸ್ವರೂಪ್,ಯೇನೆಪೊಯ ದಂತ ವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿ ಡಾ.ಪ್ರಮಾದ ಪ್ರಭಾಕರ್, ಡಾ.ಅಲಿ, ಮ್ಯಾನೇಜರ್ ಭರತ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.