
ಮುಂಡಾಜೆ: ಪಂಚಾಯತ್ ಸಭಾಂಗಣದಲ್ಲಿ ಕೀರ್ತನ ಕಲಾತಂಡ ಮುಂಡಾಜೆ ಇದರ ಆಶಯದಲ್ಲಿ ಆಟಿಡೊಂಜಿ ಐತಾರ ಕಾರ್ಯಕ್ರಮ ಜು.20ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಬು ಪೂಜಾರಿ ಕೂಳೂರು ವಹಿಸಿ, ಆಟಿ ತಿಂಗಳಿನ ವಿಶೇಷತೆ ಹಾಗೂ ಆಟಿ ತಿಂಗಳಿನ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮವನ್ನು ರತ್ನರಾಜ ಹೆಗಡೆ ನೆಯ್ಯಾಲ್ ಅವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು.
ಕುಂಜಣ್ಣ ನಾಯ್ಕ ಹುರ್ತಜೆ, ರಾಮಚಂದ್ರ ಭಟ್ ಅರೆಕಲ್, ಗಣೇಶ ಬಂಗೇರ, ಚೆನ್ನಕೇಶವ ಅರಸಮಜಲು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭರತ್ ಶೆಟ್ಟಿ, ಚಂದ್ರಕಾಂತ ಪ್ರಭು ನಿಡಿಗಲ್, ಜಯರಾಜ್ ಸಾಲಿಯಾನ್, ಯೋಗೀಶ್ ಗುಡಿಗಾರ್ ಕಟ್ಟಡಬೈಲು, ಶೀನಪ್ಪ ಗೌಡ, ಲೀಲಾವತಿ ಬಾಲಕೃಷ್ಣ ನಾಯ್ಕ, ಸದಾಶಿವ ನಾಯ್ಕ ಪಣಿಕ್ಕಲ್ ಇವರು ಉಪಸ್ಥಿತರಿದ್ದರು.
ತದನಂತರ ಕೀರ್ತನ ತಲಾ ತಂಡದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಂದಂತಹ ಅತಿಥಿಗಳಿಗೆ ಹಾಗೂ ಸಭಿಕರಿಗೆ ತಂಡದ ಸದಸ್ಯರು ತಯಾರಿಸಿದಂತಹ ವಿವಿಧ ತಿಂಡಿ ತಿನಿಸುಗಳನ್ನು ನೀಡಲಾಯಿತು. ಮಧ್ಯಾಹ್ನದ ನಂತರ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿ, ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು.
ಅತಿಥಿಗಳನ್ನು ಕಲಾತಂಡದ ಅಧ್ಯಕ್ಷ ಸದಾನಂದ ಬಿ. ಮುಂಡಾಜೆ ಸ್ವಾಗತಿಸಿದರು. ಜಿತೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು. ವಿನಿತ್ ಧನ್ಯವಾದವಿತ್ತರು.