
ವೇಣೂರು: ನಿಟ್ಟಡೆ ಕುಂಭಶ್ರೀ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಸಿಎ ಓರಿಯಂಟೇಶನ್ 2K25 ವಿಶೇಷ ಕಾರ್ಯಾಗಾರ ಜು. 24ರಂದು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಕೊಕ್ರಾಡಿ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಿಯಸ್ ಉದ್ಘಾಟಿಸಿದರು. ಅವರು ಮಾತನಾಡಿ
“ಸಿಎ ವೃತ್ತಿ ಸಾಧನೆಗೆ ಪರಿಶ್ರಮ, ಸಮರ್ಪಣೆ ಹಾಗೂ ನಿಷ್ಠೆ ಮುಖ್ಯ. ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಶ್ರಮಿಸಬೇಕು” ಎಂದು ಪ್ರೇರಣಾದಾಯಕ ಎಂದರು.
ಅತಿಥಿಗಳಾಗಿ ಹಾಜರಿದ್ದ ಚಾರ್ಟರ್ ಅಕೌಂಟೆಂಟ್ ಕಿರಣ್ ಆನಂತ್ರಾಯ್ ತಮ್ಮ ವೃತ್ತಿಜೀವನದ ಅನುಭವ ಹಂಚಿಕೊಂಡು
“ಅಕೌಂಟೆಂಟ್‌ಗಳು ಕೇವಲ ಸಂಖ್ಯೆಗಳ ಲೆಕ್ಕಾಚಾರ ಮಾಡುವವರಲ್ಲ; ಅವರು ಆರ್ಥಿಕ ಕಥೆಗಾರರು. ಪ್ರಾಮಾಣಿಕತೆ, ಪರಿಶ್ರಮ ಹಾಗೂ ಸಮಯ ನಿರ್ವಹಣೆ ಈ ವೃತ್ತಿಯ ಆಧಾರಸ್ತಂಭಗಳು” ಎಂದು ಹೇಳಿದರು.
ಚಾರ್ಟರ್ ಅಕೌಂಟೆಂಟ್ ದೀಪಿಕಾ ವಸಾನಿ ಮಾತನಾಡಿ
“ಸಿಎ ಪಠ್ಯಕ್ರಮವು ಆರ್ಥಿಕ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಶಿಸ್ತಿನ ಜೀವನ ಹಾಗೂ ನಿರ್ಧಾರ ಸಾಮರ್ಥ್ಯವನ್ನು ಬೆಳೆಸುತ್ತದೆ” ಎಂದು ಅಭಿಪ್ರಾಯಪಟ್ಟರು.
ಕುಂಭಶ್ರೀ ವಿದ್ಯಾ ಸಂಸ್ಥೆ ಸಂಸ್ಥಾಪಕ ಗಿರೀಶ್ ಕೆ.ಹೆಚ್., ಪ್ರಾಂಶುಪಾಲೆ ಓಮನಾ ಎಂ.ಎ., ಸಂಚಾಲಕ ಲೆಫ್ಟಿನೆಂಟ್ ಅಶ್ವಿತ್ ಕುಲಾಲ್ ಸಂದೇಶಗಳನ್ನು ನೀಡಿದರು. ಜೀವಶಾಸ್ತ್ರ ಉಪನ್ಯಾಸಕ ಮನೋಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಸಿ.ಎ. ಕೋರ್ಸ್‌ನ ಹಂತಗಳು, ಓದು ವಿಧಾನ, ಪರೀಕ್ಷಾ ತಯಾರಿ ಹಾಗೂ ವೃತ್ತಿ ಅವಕಾಶಗಳ ಕುರಿತು ಸಂಪೂರ್ಣ ವಿವರಗಳನ್ನು ನೀಡಲಾಯಿತು.
ಕಾರ್ಯಕ್ರಮಕ್ಕೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ಕುಂಭಶ್ರೀ ಕಾರ್ಯಕ್ರಮ ಭವನದಲ್ಲಿ ವಿಜೃಂಭಣೆಯಿಂದ ನಡೆದ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಯಿತು.
ಉಪನ್ಯಾಸಕಿ ಲಿಖಿತಾ ಎಂ. ಸ್ವಾಗತಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕಿ ಶರಣ್ಯ ಕೆ.ಎಸ್. ಕಾರ್ಯಕ್ರಮವನ್ನು ನಿರೂಪಿಸಿದರು.ಗಣಕವಿಜ್ಞಾನ ಉಪನ್ಯಾಸಕ ಅಭಿಲಾಷ್ ಕಾಮತ್ ವಂದಿಸಿದರು.