




ಬೆಳ್ತಂಗಡಿ: ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್.ಐ.ಟಿ ತನಿಖೆ ಮುಂದುವರೆದಿದ್ದು, ಸೆ.12ರಂದು ವಿಚಾರಣೆಗೆ ಗಿರೀಶ್ ಮಟ್ಟಣ್ಣನವರ್, ಪ್ರದೀಪ್, ಜಯಂತ್ ಟಿ. ಆಗಮಿಸಿದ್ದಾರೆ. ಮತ್ತೆ ವಿಚಾರಣೆಗೆ ಹಾಜರಾಗುವಂತೆ ಪ್ರದೀಪ್ ಗೆ ಎಸ್.ಐ.ಟಿ ಬುಲಾವ್ ನೀಡಿದ್ದರಿಂದ ಪ್ರದೀಪ್ ಐದನೇ ದಿನದ ವಿಚಾರಣೆ ಎದುರಿಸುತ್ತಿದ್ದಾರೆ. ಜಯಂತ್ ಟಿ 9ನೇ ಹಾಗೂ ಮಟ್ಟಣ್ಣನವರ್ 8 ನೇ ದಿನದ ವಿಚಾರಣೆಗೆ ಆಗಮಿಸಿದ್ದಾರೆ.









