

ಬೆಳ್ತಂಗಡಿ: ಕಳೆದ 13 ವರ್ಷಗಳಿಂದ ನಿರಂತರವಾಗಿ ಸಮಾಜದಿಂದ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ರಾಜ ಕೇಸರಿಯ ಟ್ರಸ್ಟ್ ನ್ನು ಹುಟ್ಟಿಹಾಕಿ ಶ್ರಮಿಕ ಯುವಕರನ್ನು ಒಟ್ಟುಗೂಡಿಸಿ ಮತ್ತು ಅವರ ಕೈಲಾದ ಸೇವಾ ಮೂಲಕ ಸಮಾಜದ ದಾನಿಗಳ ಮೂಲಕ ಅದೆಷ್ಟೋ ಕುಟುಂಬಗಳಿಗೆ ಆಸರೆಯಾಗಿ ಎಷ್ಟೋ ವಿದ್ಯಾರ್ಥಿಗಳ ಬಾಳಲ್ಲಿ ಬೆಳಕಾಗಿ ರಾಜ್ಯ ಮಟ್ಟದಲ್ಲಿ ಜನ ಸೇವಾ ಮನೋಭಾವದ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವಂತಹ ಸೇವಾ ಸಂಘಟನೆಯಾದ ರಾಜ ಕೇಸರಿ ಸಂಘಟನೆ ಈ ಸಂಘಟನೆಯನ್ನು ಮುನ್ನಡೆಸುತ್ತಿರುವಂತಹ ದೀಪಕ್ ಜಿ. ಬೆಳ್ತಂಗಡಿ ಅವರಿಗೆ ಜೀವನ್ ಜಾಗೃತಿ ಸೇವಾ ಸಂಸ್ಥೆ ವತಿಯಿಂದ ಸುಭಾಷ್ ಚಂದ್ರ ಬೋಸ್ ಐಕಾನ್ ಪ್ರಶಸ್ತಿ ಲಭಿಸಿದೆ.