
ಬೆಳಾಲು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಕುಂಡಡ್ಕ ಅರಣ್ಯ ಸಮಿತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಜು. 23ರಂದು ನಡೆಸಲಾಯಿತು. ಹಲಸು, ಮಾವು, ಅಶ್ವಥ, ಹುಣಸೆ, ಕಾಡು ದಾಸವಾಳ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ಗ್ರಾಮ ಅರಣ್ಯ ಸಮಿತಿಯ ಸದಸ್ಯರು ನಾಟಿ ಮಾಡಿದರು. ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಜೆರಾಲ್ಡ್ ಡಿಸೋಜ, ಗಸ್ತು ಅರಣ್ಯ ಪಾಲಕ ಕೆ.ಎನ್.ಜಗದೀಶ್, ಅರಣ್ಯ ವೀಕ್ಷಕ ಸಂತೋಷ್, ಕುಂಡಡ್ಕ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಗಂಗಾಧರ ಗೌಡ ಸೇರಿದಂತೆ ಹೆಚ್ಚಿನ ಸದಸ್ಯರು, ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ಮಾಚಾರು ಸ್ವಾಗತಿಸಿದರು. ಶಿಕ್ಷಕರಾದ ದಿನೇಶ್ ಕೆ. ಹಾಗೂ ಕರಿಯಣ್ಣ ಗೌಡ ಸಹಕರಿಸಿದರು.