ಧರ್ಮಸ್ಥಳ: ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಪೋಷಕರ ಸಭೆ

0

ಧರ್ಮಸ್ಥಳ: ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರರಿಂದ, ಹತ್ತನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಮನಃಶಾಸ್ತ್ರ ವಿಭಾಗದ ಉಪನ್ಯಾಸಕಿ ಪದ್ಮಶ್ರೀ ಜೈನ್ ಆಗಮಿಸಿ ದೀಪ ಪ್ರಜ್ವಲಿಸಿ ಚಾಲನೆ ಬಳಿಕ ಮಾತನಾಡಿದ ಅವರು ಆರೋಗ್ಯಕರ ಕುಟುಂಬದಲ್ಲಿ ಮಗು ಹೇಗೆ ಸಂತೋಷವಾಗಿ ಬೆಳೆಯುತ್ತದೆ ಎಂಬುದನ್ನು ವಿವರಿಸಿದರು. ಹೆತ್ತವರ ವಿವಿಧ ಬಗೆಗಳು,ವಿದ್ಯಾರ್ಥಿಗಳು ಹೇಗೆ ಇರುತ್ತಾರೆ, ಹೆತ್ತವರ ಜವಾಬ್ದಾರಿಯನ್ನು ಹಲವಾರು ನೈಜ ಉದಾಹರಣೆಗಳನ್ನು ನೀಡುತ್ತಾ ಹೆತ್ತವರ ಜೊತೆಗೆ ಸಂವಾದವನ್ನು ನಡೆಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ. ಶಾಲಾ ರೀತಿ ನೀತಿಗಳ ಕುರಿತು, ಮಾದಕ ವ್ಯಸನಿಗಳ ಕುರಿತು ಅದರ ಜಾಗೃತಿ ಕುರಿತು, ಹೊಸ ಪರೀಕ್ಷಾ ವಿಧಾನಗಳನ್ನು ಕುರಿತು ವಿವರಿಸಿದರು. ಶಾಲಾ ಸಹಶಿಕ್ಷಕಿ ಕಾವ್ಯ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳ ಪೋಷಕರು ಹಾಗೂ ಶಾಲಾ ಶಿಕ್ಷಕರಿಂದ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.

LEAVE A REPLY

Please enter your comment!
Please enter your name here