
ಪಣಕಜೆ: ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯಿಂದ ನಡೆಯುವ 23ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವದ ಅಧ್ಯಕ್ಷರಾಗಿ ಸುದೀಪ್ ಸಬರಬೈಲ್ ಆಯ್ಕೆಗೊಂಡರು. ಸಮಿತಿಯ ಗೌರವಾಧ್ಯಕ್ಷರಾಗಿ ಲೀಲಾವತಿ ವಸಂತ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಪ್ರಭು ಮುಂಡಾಡಿ, ಕೋಶಾಧಿಕಾರಿಯಾಗಿ ಮನೋಜ್ ಕೋಟ್ಯಾನ್, ಉಪಾಧ್ಯಕ್ಷರಾಗಿ ಕೃಷ್ಣಪ್ಪ ಕುಲಾಲ್ ಬರ್ನ, ಕಾರ್ಯದರ್ಶಿಗಳಾಗಿ ಯೋಗೀಶ್ ಆರ್., ಕೃಷ್ಣ ನಗರ, ಜನಾರ್ಧನ ಕುಲಾಲ್ ಪಮ್ಮಾಜೆ, ಕ್ರೀಡಾ ಸಂಚಾಲಕರಾಗಿ ವಿನುತ್ ಕುಮಾರ್ ಶೆಟ್ಟಿ, ರಾಜೇಶ್ ಕುಲಾಲ್ ಮುಂಡಾಡಿ, ಬೇಬಿ ವಡ್ಡ, ಪ್ರಮೀಳಾ ಆಯ್ಕೆಗೊಂಡರು.