ಕುವೆಟ್ಟು: ಮದ್ದಡ್ಕ ಸಬರಬೈಲು ಶಾಲಾ ಸಮೀಪ ಎಲೆಕ್ಟ್ರಿಕ್ ಆಟೋ ಜು.22ರಂದು ಸಂಜೆ ಎದುರಿನಿಂದ ಬರುವ ವಾಹನಕ್ಕೆ ಸೈಡ್ ಕೊಡುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಚಾಲಕನ ಕಾಲಿಗೆ ತಲೆಗೆ ಗಾಯವಾಗಿದ್ದು, ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋದಲ್ಲಿ ಮೂರು ಮಕ್ಕಳು ಇದ್ದರು ಎನ್ನಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.