ಬೆಳ್ತಂಗಡಿ ಬಿಲ್ಲವ ಸಂಘದಲ್ಲಿ ಆಟಿದ ಅಟಿಲ್ದ ಕೂಟ

0

ಬೆಳ್ತಂಗಡಿ: ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ, ಬಿಲ್ಲವ ಮಹಿಳಾ ವೇದಿಕೆ, ಯುವ ಬಿಲ್ಲವ ವೇದಿಕೆ ಆಶ್ರಯದಲ್ಲಿ ಜು. 20ರಂದು ಶ್ರೀ ಗುರು ನಾರಾಯಣ ಸ್ವಾಮಿ ಸಂಕೀರ್ಣದಲ್ಲಿ ಆಟಿದ ಅಟಿಲ್ದ ಕೂಟ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆಯನ್ನು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ವಹಿಸಿದ್ದರು. ಮುಂಡತ್ತೋಡಿ ಸ. ಹಿ. ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಸೇವಂತಿ ನಿರಂಜನ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಆಟಿ ತಿಂಗಳ, ತುಳುವ ಸಂಸ್ಕೃತಿ ಆಚರಣೆ ಬಗ್ಗೆ ಮಾತನಾಡಿದರು.

ಸಂಘದ ಮಾಜಿ ಅಧ್ಯಕ್ಷ ನಿವೃತ್ತ ಎಸ್. ಪಿ. ಪೀತಾಂಬರ ಹೇರಾಜೆ, ನಿವೃತ್ತ ಪ್ರಾಂಶುಪಾಲ ಪ್ರೊ. ಎ. ಕೃಷ್ಣಪ್ಪ ಪೂಜಾರಿ, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ, ಪ್ರಧಾನ ಕಾರ್ಯದರ್ಶಿ ನಿತೇಶ್ ಹೆಚ್. ಮಹಿಳಾ ಬಿಲ್ಲವ ವೇದಿಕೆಯ ಕಾರ್ಯದರ್ಶಿ ಶಾಂಭವಿ ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹಿಳಾ ಬಿಲ್ಲವ ವೇದಿಕೆ ಯ ಅಧ್ಯಕ್ಷೆ ಸುಮತಿ ಪ್ರಮೋದ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕರು, ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆಯ ಪದಾಧಿಕಾರಿಗಳು, ಸದಸ್ಯರು, ಗ್ರಾಮ ಸಮಿತಿಗಳ ಪದಾಧಿಕಾರಿಗಳು ಹಾಜರಿದ್ದರು.

ಬಳಿಕ ಮಹಿಳಾ ಬಿಲ್ಲವ ವೇದಿಕೆಯ ಪದಾಧಿಕಾರಿಗಳು ತಯಾರಿ ತಂದಿರುವ ಆಟಿ ತಿಂಗಳ ವಿವಿಧ 45 ಬಗೆಯ ಖಾದ್ಯ ಗಳ ಸಹ ಭೋಜನ ನಡೆಯಿತು. ವಿವಿಧ ಖಾದ್ಯ ಮಾಡಿ ತಂದಿರುವ ಮಹಿಳೆಯರನ್ನು ಗೌರವಿಸಲಾಯಿತು.

ಸುಧಾಮಣಿ ಆರ್. ಕಾರ್ಯಕ್ರಮ ನಿರೂಪಿಸಿದರು. ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಎಂ. ಕೆ. ಪ್ರಸಾದ್ ವಂದಿಸಿದರು.

LEAVE A REPLY

Please enter your comment!
Please enter your name here