ಬೆಳ್ತಂಗಡಿ: ಕಲ್ಮಂಜದ ಸುಪ್ರಿಯಾ ವುಡ್ ಇಂಡಸ್ಟ್ರೀಸ್ ನ ಮಾಲಕ ಮುಹಮ್ಮದ್ ಮುಜೀಬ್ ಅವರ ಪುತ್ರ ನ್ಯಾಯವಾದಿ ಮಹಮ್ಮದ್ ಅಹಮ್ಮದ್ ಅವರ ನೂತನ ‘ಅಪೆಕ್ಸ್ ಲೀಗಲ್ ಸರ್ವಿಸಸ್’ ಕಚೇರಿ ಲಾಯಿಲದ ನೂರುಲ್ ಹುದಾ ಕಾಂಪ್ಲೆಕ್ಸ್ ನಲ್ಲಿ ಜು.20ರಂದು ಶುಭಾರಂಭಗೊಂಡಿತು.

ನೂತನ ಕಚೇರಿಯನ್ನು ಹಿರಿಯ ನ್ಯಾಯವಾದಿ ಬಿ. ಕೆ. ಧನಂಜಯ ರಾವ್ ಉದ್ಘಾಟಿಸಿದರು.

ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು ವಕೀಲ ವೃತ್ತಿ ಶ್ರೇಷ್ಠ ವೃತ್ತಿಯಾಗಿದ್ದು ಕಕ್ಷಿಗಾರರನ್ನು ದೇವರಂತೆ ಕಾಣಬೇಕು, ಅವರ ಕಣ್ಣೀರು ಒರೆಸುವ ಪ್ರಾಮಾಣಿಕ ಕಾರ್ಯವನ್ನು ಮಾಡಬೇಕು ಎಂದು ಕಿವಿಮಾತು ಹೇಳಿ ಕಿರಿಯ ವಕೀಲರು ಸ್ವಂತ ಕಚೇರಿ ನಡೆಸುವುದು ಹಿರಿಯ ವಕೀಲರಿಗೆ ಹೆಮ್ಮೆಯ ವಿಚಾರ ಎಂದು ಹೇಳಿ ಶುಭ ಹಾರೈಸಿದರು.

ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮಾತನಾಡುತ್ತಾ ವಕೀಲರ ಮೇಲೆ ನಂಬಿಕೆ ಇಟ್ಟು ಬರುವ ಕಕ್ಷಿದಾರರ ಬಗೆಗಿನ ಕಡತಗಳನ್ನು ಸರಿಯಾಗಿ ಮನನ ಮಾಡಿಕೊಂಡು ತಯಾರಿ ನಡೆಸಿ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದರು .

ಉದ್ಘಾಟನಾ ಸಮಾರಂಭದಲ್ಲಿ ಕಲ್ಮಂಜದ ಸುಪ್ರಿಯಾ ವುಡ್ ಇಂಡಸ್ಟ್ರೀಸ್ ನ ಮಾಲಕ ಮುಹಮ್ಮದ್ ಮುಜೀಬ್, ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಹೆಚ್ಚುವರಿ ಸರ್ಕಾರಿ ವಕೀಲರಾದ ಮನೋಹರ ಕುಮಾರ್, ಹಿರಿಯ ವಕೀಲರಾದ ಮಹಮ್ಮದ್ ಹನೀಫ್ ಮತ್ತು ಸಿಯೂನ್ ಆಶ್ರಮದ ಟ್ರಸ್ಟಿ ಯು. ಸಿ. ಪೌಲೋಸ್ ಶುಭ ಹಾರೈಸಿದರು.
ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ. ಕೆ, ಹಿರಿಯ ವಕೀಲರುಗಳಾದ ಶಶಿಕಿರಣ್ ಜೈನ್, ಗಂಗಾಧರ ಪೂಜಾರಿ, ತಿಮ್ಮಪ್ಪ ಗೌಡ, ದಿನೇಶ್ ಶೆಟ್ಟಿ, ಪ್ರಸಾದ್ ಕೆ.ಎಸ್., ಶೈಲೇಶ್ ಆರ್. ಠೋಸರ್, ಮತ್ತು ಪ್ರವೀಣ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.