ಮಡಂತ್ಯಾರು-ಪುಂಜಾಲಕಟ್ಟೆ ವಾಣಿಜ್ಯ ಕೈಗಾರಿಕೆ ಮತ್ತು ಸೇವಾ ಉದ್ದಿಮೆದಾರರ ಸಂಘದ ವರ್ತಕ ಸಮ್ಮಿಲನ ಕಾರ್ಯಕ್ರಮ:ಸಾಧಕರಿಗೆ ಸನ್ಮಾನ-ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ-ಅಸಕ್ತರಿಗೆ ಆರ್ಥಿಕ ಸಹಾಯಧನ ವಿತರಣೆ

0

ಮಡಂತ್ಯಾರು; ಮಡಂತ್ಯಾರು-ಪುಂಜಾಲಕಟ್ಟೆ ವತಿಯಿಂದ ಪ್ರಾರಂಭಿಸಲಾದ ವರ್ತಕ ಬಂಧು ಸಹಕಾರಿ ಸಂಘದ 2024-25ನೇ ಸಾಲಿನಲ್ಲಿ 48 ಕೋಟಿಗೂ ಹೆಚ್ಚಿನ ವಾರ್ಷಿಕ ವ್ಯವಹಾರವನ್ನು ಮಾಡಿ ಯಶಸ್ವಿ 2 ವರ್ಷ ಪೂರೈಸಿ, 3ನೇ ವರ್ಷಕ್ಕೆ ಪಾದಾರ್ಪಣೆಗೈಯುವ ಸಂದರ್ಭದಲ್ಲಿ
ಸಂಭ್ರಮಾಚರಣೆ ಮತ್ತು ವರ್ತಕ ಸಮ್ಮಿಲನ ಕಾರ್ಯಕ್ರಮ
ಜು.20ರಂದು ಮಡಂತ್ಯಾರು ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ಜರಗಿತು.

ರೈತಬಂಧು ಆಹಾರೋದ್ಯಮ ಪ್ರೈ.ಲಿ. ಮಾಲಕ ಶಿವಶಂಕರ್ ನಾಯಕ್, ಬೆಳ್ತಂಗಡಿ ಹಿರಿಯ ಖ್ಯಾತ ನ್ಯಾಯವಾದಿ
ಭಗೀರಥ ಜಿ., ಉಜಿರೆ ವರ್ತಕರ ಸಂಘ ಅಧ್ಯಕ್ಷ ಅರವಿಂದ್ ಕಾರಂತ್, ಬೆಳ್ತಂಗಡಿ ವರ್ತಕರ ಸಂಘ ಅಧ್ಯಕ್ಷ ರೊನಾಲ್ಡ್ ಲೋಬೋ, ಮಡಂತ್ಯಾರು ವರ್ತಕ ಬಂಧು ಸಹಕಾರಿ ಸಂಘದ
ಮುಖ್ಯ ಸಲಹೆಗಾರ ಮೋನಪ್ಪ ಪೂಜಾರಿ ಕಂಡೆತ್ಯಾರು ಉಪಸ್ಥಿತರಿದ್ದರು.

ಗೌರವ ಪುರಸ್ಕಾರ: ಮಾಲೀಕ ಉಜಿರೆ ಸಂಧ್ಯಾ ಪ್ರೇಶ್ ಅರ್ಚನಾ ರಾಜೇಶ್ ಪೈ, ರೊನಾಲ್ಡ್ ಸಿಲ್ವಾನ್ ಡಿ’ಸೋಜಾ, ಕಾರ್ಯನಿರ್ವಾಹಕ ನಿರ್ದೇಶಕ LEKSA ಲೈಟಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಹಿರಿಯ ವರ್ತಕರಾದ ಅನಿಲ್ ಅಧಿಕಾರಿ, ವಲೇರಿಯನ್ ರೋಡ್ರಿಗಸ್, ಲೋಕೇಶ್ ಆಚಾರ್ಯ, ಸ್ಟೇನಿ ಮಾಡ್ತಾ, ಮೊಹಮ್ಮದ್ ಅವರನ್ನು ಸನ್ಮಾನಿಸಲಾಯಿತು.

ಎಸ್.ಎಸ್.ಎಲ್. ಸಿ., ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ 95% ಗಿಂತ ಜಾಸ್ತಿ ಅಂಕಗಳಿಸಿದ ವರ್ತಕರ ಮಕ್ಕಳಿಗೆ ಮನ್ನಣೆ ಗಳಿಸಿತು.

  • ಸ್ಥಳೀಯ ಶಾಲಾ ಕಾಲೇಜಿನಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು.
  • ಅನಾರೋಗ್ಯದಿಂದ ಬಳಲುತ್ತಿರುವ ವರ್ತಕರಿಗೆ/ ಸಿಬ್ಬಂದಿಗಳಿಗೆ ಸಹಾಯಹಸ್ತ ಮಾಡಿದರು. ಅಧ್ಯಕ್ಷ ಜಯಂತ್ ಶೆಟ್ಟಿ ಪ್ರಾಸ್ತವಿಕ ಮಾತನಾಡಿ ಸ್ವಾಗತಿಸಿದರು. ನಾರಾಯಣ ಶೆಟ್ಟಿ ಮತ್ತು ತುಳಸಿದಾಸ್ ಕಾರ್ಯಕ್ರಮ ನಿರೂಪಿಸಿದರು. ಡಿಗ್ನ ಮೊರಾಸ್ ಮತ್ತು ಅಮಿತಾ ಲೋಬೊ ಸನ್ಮಾನಿತರ ಪರಿಚಯ ಮಾಡಿದರು.
  • ಅಧ್ಯಕ್ಷ ಬಿ. ಜಯಂತ ಶೆಟ್ಟಿ, ಕಾರ್ಯದರ್ಶಿ ತುಳಸಿದಾಸ ಪೈ, ಉಪಾಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು, ವರ್ತಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here