
ಬೆಳ್ತಂಗಡಿ: ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕೃಷಿ ಜಾಗದ ನೊಂದಣಿಯಲ್ಲಿ ಉಂಟಾಗಿರುವ ಸಮಸ್ಯೆಯ ಕುರಿತು ಜು.17ರಂದು ಇನ್ಸೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಹಾಗೂ ರಿಜಿಸ್ಟ್ರಾರ್ ಆಫ್ ಸ್ಟ್ಯಾಂಪ್ಸ್ ಆಗಿರುವ ಮುಲೈಮುಗಿಲನ್ ಅವರನ್ನು ಶಾಸಕ ಹರೀಶ್ ಪೂಂಜರವರು ಭೇಟಿ ಮಾಡಿ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಮನವಿ ಮಾಡಿದರು.