ಗುರುವಾಯನಕೆರೆ: ಎಕ್ಸೆಲ್ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ಎಕ್ಸೆಲ್ ಪದವಿ ಪೂರ್ವ ಕಾಲೇಜು ವಿದ್ಯಾಸಾಗರ ಕ್ಯಾಂಪಸ್ ಹಾಗೂ ಅರಮಲೆ ಬೆಟ್ಟ ಕ್ಯಾಂಪಸ್ ಗಳ ಬೋಧಕ ವೃಂದ ಹಾಗೂ ಆಡಳಿತ ಕಛೇರಿ ಉದ್ಯೋಗಿಗಳ ವತಿಯಿಂದ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ವಿಜಯವಾಣಿ ಪತ್ರಿಕೆಯ ವತಿಯಿಂದ ವಿಜಯ ರತ್ನ – 2025 ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸುಮಂತ್ ಕುಮಾರ್ ಜೈನ್ ಅವರು ‘ ಪ್ರಶಸ್ತಿ ಇಡೀ ನಮ್ಮ ಎಕ್ಸೆಲ್ ಕುಟುಂಬಕ್ಕೆ ಸಮರ್ಪಿತವಾಗಿದೆ. ಪುರಸ್ಕಾರ ಬಂದಾಗ ಹಿಗ್ಗದೆ, ತಿರಸ್ಕಾರ ಆದಾಗ ಜಗ್ಗದೆ ಇರುವುದೇ ನಿಜವಾದ ನಾಯಕತ್ವ. ಅಂಥ ವ್ಯಕ್ತಿತ್ವವನ್ನು ತನ್ನ ತಂದೆ ತಾಯಿ, ಗುರು ವೃಂದ ತನಗೆ ಅನುಗ್ರಹಿಸಿದೆ ‘ ಎನ್ನುತ್ತಾ ‘ಬೆರಳೆಣಿಕೆಯ ಉದ್ಯೋಗಿಗಳಿದ್ದ ನಮ್ಮ ಎಕ್ಸೆಲ್ ಕಾಲೇಜಿನಲ್ಲಿ ಈಗ 700ಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದಾರೆ. ಶಾಖೋಪಶಾಖೆಗಳಾಗಿ ಸಂಸ್ಥೆ ಬೆಳೆಯುತ್ತಿದೆ. ಅತ್ಯುತ್ತಮ ಫಲಿತಾಂಶದ ಜೊತೆಗೆ ದೊಡ್ಡ ಮಟ್ಟದಲ್ಲಿ ದಾಖಲಾತಿ ಕೂಡಾ ನಡೆಯುತ್ತಿದೆ . ಇಂಥ ಯಶಸ್ಸಿಗೆ ಕಾರಣರಾದ ಎಲ್ಲರನ್ನೂ ತಾನು ಸ್ಮರಿಸುವುದಾಗಿ ಅವರು ಹೇಳಿದರು.

ಎಕ್ಸೆಲ್ ಕಾಲೇಜು ವಿದ್ಯಾ ಸಾಗರ ಕ್ಯಾಂಪಸ್ ನ ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ಮಾತನಾಡಿ, ‘ ಪುಟ್ಟ ಸಂಸ್ಥೆಯಾಗಿದ್ದ ನಮ್ಮ ಕಾಲೇಜು, ಇಂದು ಬೃಹತ್ ಆಗಿ ಬೆಳೆದಿದೆ. ಇದಕ್ಕೆ ಪ್ರಮುಖ ಕಾರಣಕರ್ತರು ನಮ್ಮ ಅಧ್ಯಕ್ಷರು. ಅವರಿಗೆ ಇನ್ನಷ್ಟು ಉನ್ನತ ಸ್ಥಾನ ಮಾನ, ಪ್ರಶಸ್ತಿ – ಪುರಸ್ಕಾರಗಳು ಒಲಿದು ಬರಲಿ ‘ ಎಂದು ಹಾರೈಸಿದರು.
ಅರಮಲೆಬೆಟ್ಟ ಕ್ಯಾಂಪಸ್ ನ ಪ್ರಾಂಶುಪಾಲ ಡಾ.ಪ್ರಜ್ವಲ್ ಕಜೆ ಮಾತನಾಡಿ, ‘ ಕಠಿಣ ಪರಿಸ್ಥಿತಿಯಲ್ಲೂ ಧೃತಿ ಗೆಡದೆ ಮುನ್ನಡೆಯುವ ಮನಸ್ಥಿತಿ ಅಧ್ಯಕ್ಷರದು ‘ ಎಂದರು.
ಕ್ಯಾಂಪಸ್ ಮ್ಯಾನೇಜರ್ ಶಾಂತಿರಾಜ್ ಜೈನ್ ಮಾತನಾಡಿ, ‘ ಪ್ರಶಸ್ತಿ ನಮ್ಮ ಜವಾಬ್ದಾರಿಯನ್ನು ಹೆಚ್ಚು ಮಾಡುತ್ತದೆ. ಪ್ರಸ್ತುತ ವಿಜಯರತ್ನ ಪ್ರಶಸ್ತಿ ನಮ್ಮ ಅಧ್ಯಕ್ಷರ ಹೊಣೆಯನ್ನು ಹೆಚ್ಚಿಸಿದೆ ‘ ಎಂದರು.
ವಿಜಯ ರತ್ನ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಪಂಚಲೋಹದ
ಬೃಹತ್ ಸರಸ್ವತಿ ವಿಗ್ರಹ, ಕೆಂದಾಳಿ ಎಳನೀರು ಗೊನೆ, ಕದಳಿ ಬಾಳೆ ಗೊನೆಗಳನ್ನು ಸಮರ್ಪಿಸಲಾಯಿತು. ಸರಸ್ವತಿ ದೇವಿ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಕಾಲೇಜಿನಲ್ಲೇ ಅದನ್ನು ಇರಿಸಲು ಅಧ್ಯಕ್ಷರು ನಿರ್ಧರಿಸಿದರು. ಪ್ರಾಂಶುಪಾಲರು, ಪ್ರಾಧ್ಯಾಪಕರು, ಆಡಳಿತ ಕಚೇರಿಯ ಸಿಬ್ಬಂದಿ ಹೂಹಾರ ಹಾಗೂ ಹೂ ಗುಚ್ಛ ನೀಡಿ ಗೌರವಿಸಿದರು.

ವೇದಿಕೆಯಲ್ಲಿ ಸುಮಂತ್ ಕುಮಾರ್ ಜೈನ್ ಅವರ ತಂದೆ ಸತೀಶ್ ಕುಮಾರ್ ಆರಿಗ ಹಾಗೂ ತಾಯಿ ಶುಭಲತಾ, ಆಡಳಿತಾಧಿಕಾರಿ ಕೀರ್ತಿನಿಧಿ ಜೈನ್, ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಈಶ್ವರ್ ಶರ್ಮ, ಗಣಿತ ವಿಜ್ಞಾನ ವಿಭಾಗದ ಪ್ರಸಾದಿ ಚೇತನ್, ಪ್ರವೀಣ್ ಪಾಟೀಲ್, ಜೀವ ವಿಜ್ಞಾನ ವಿಭಾಗದ ದೀಪಾ, ಗಣಕ ವಿಜ್ಞಾನ ವಿಭಾಗದ ಪ್ರಭಾಕರ್, ಕನ್ನಡ ವಿಭಾಗ ಮುಖ್ಯಸ್ಥ ಜಯರಾಮ್, ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆಕೆ, ವಿಭಾಗ ಮುಖ್ಯಸ್ಥ ಪ್ರಸನ್ನ ಭೋಜ, ಆಡಳಿತ ಮಂಡಳಿಯ ಸಹನಾ ಜೈನ್, ಪದ್ಮ ಪ್ರಸಾದ್ ಮೊದಲಾದವರಿದ್ದರು.
ಭೌತ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಸತ್ಯನಾರಾಯಣ ಭಟ್ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆ.ಕೆ. ನಿರೂಪಿಸಿದರು. ಕನ್ನಡ ವಿಭಾಗದ ಮೊಹಮ್ಮದ್ ಮುನೀರ್ ವಂದಿಸಿದರು.