ಬೆಳ್ತಂಗಡಿ: ಕಳಿಯ ಗ್ರಾಮ ಪಂಚಾಯತ್ ನಲ್ಲಿ ಸ್ವಚ್ಛತಾ ಜಾಗೃತಿ ಅಭಿಯಾನ ಕಾರ್ಯಕ್ರಮದ ಭಾಗವಾಗಿ ಆಡಳಿತ ಮಂಡಳಿಯು ಅಧಿಕಾರಿಗಳೊಂದಿಗೆ ಪಂಚಾಯತ್ ವ್ಯಾಪ್ತಿಯ ಹಲವು ಅಂಗಡಿ, ಹೋಟೆಲ್, ಪ್ಲ್ಯಾಟ್ ಗಳಲ್ಲಿರುವ ಮನೆಗಳಿಗೆ ಮತ್ತು ವಿವಿಧ ಕಡೆ ಸಂಚರಿಸಿ ಎಲ್ಲೆಂದರಲ್ಲಿ ರಸ್ತೆ ಬದಿ ಮತ್ತು ಇತರ ಜನ ವಸತಿ ಪ್ರದೇಶದಲ್ಲಿ ತ್ಯಾಜ್ಯವನ್ನು ಎಸೆಯುವುದರ ಬಗ್ಗೆ ಜಾಗೃತಿ ಮೂಡಿಸಿ ಒಣ ಕಸವನ್ನು ಬೇರ್ಪಡಿಸಿ ಪಂಚಾಯತ್ ನೀಡಿರುವ ಚೀಲದಲ್ಲಿ ಶೇಖರಿಸಿಟ್ಟು 2 ದಿನಗಳಿಗೊಮ್ಮೆ ಬರುವ ಪಂಚಾಯತ್ ಸ್ವಚ್ಛತಾ ವಾಹನಕ್ಕೆ ಹಸ್ತಾಂತರಿಸುವಂತೆ ಮಾಹಿತಿ ತಿಳಿಸಿ ಪಂಚಾಯತ್ ನೊಂದಿಗೆ ಸಹಕರಿಸುವಂತೆ ವಿನಂತಿಸಿ
ಮುಂದೆ ಎಲ್ಲೆಂದರಲ್ಲಿ ತ್ಯಾಜ್ಯವನ್ನು ಹಾಕಿದರೆ ಕಾನೂನು ಕ್ರಮ ಮತ್ತು ಸ್ಥಳದಲ್ಲೇ ದಂಡ ವಿಧಿಸುವುದು ಮತ್ತು ಅಂಗಡಿಯವರಾದರೆ ಲೈಸನ್ಸ್ ರದ್ದುಪಡಿಸಿ ಪಂಚಾಯತ್ ನಿಂದ ಕಠಿಣ ಕ್ರಮಕ್ಕೆಗೊಳ್ಳಲಾಗುವುದು ಎಂದು ಪ್ರತಿಯೊಬ್ಬರಿಗೂ ಎಚ್ಚರಿಕೆಯ ನೋಟಿಸು ನೀಡಲಾಯಿತು. ಹಾಗೂ ಪಂಚಾಯತ್ ಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಸಂಪೂರ್ಣ ಸಹಕಾರ ನೀಡಬೇಕೆಂದು ಗೇರುಕಟ್ಟೆ ಸ್ನೇಹ ಸಂಗಮ ಅಟೋ ಚಾಲಕ ಮಾಲಕ ಸಂಘದ ಸದಸ್ಯರಲ್ಲಿ ವಿನಂತಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ದಿವಾಕರ ಎಮ್., ಉಪಾದ್ಯಕ್ಷೆ ಇಂದಿರಾ ಬಿ., ಅಭಿವೃದ್ಧಿ ಅಧಿಕಾರಿಯಾದ ಸಂತೋಷ್ ಪಾಟೀಲ್, ಸದಸ್ಯರುಗಳಾದ ಸುದಾಕರ ಮಜಲು, ಅಬ್ದುಲ್ ಕರೀಮ್, ಮೋಹಿನಿ, ಕುಸುಮಾ ಎನ್. ಬಂಗೇರ, ಲತೀಫ್ ಪರಿಮ, ವಿಜಯ ಗೌಡ, ಹರೀಶ್ ಕುಮಾರ್, ಯಶೋದರ ಶೆಟ್ಟಿ, ಮರೀಟಾ ಪಿಂಟೋ, ಪುಷ್ಪಾ ನಾಳ, ಶ್ವೇತಾ ಕೆ., ಸಿಬ್ಬಂದಿಗಳಾದ ಸುಚಿತ್ರಾ, ಶಶಿಕಲಾ ಎಮ್., ಪ್ರಮೀಳಾ, ನಂದಿನಿ ಪಿ. ರೈ, ರವಿ ಎಚ್., ಸುರೇಶ್ ಗೌಡ, ರಂಜಿನಿ, ವಿಮಲ ಹಾಜರಿದ್ದರು.