ಬೆಳ್ತಂಗಡಿ: ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಆಡಲಿತಕ್ಕೆ ಒಳಪಟ್ಟ ಶ್ರೀ ಆದಿ ದುಮಾವತಿ, ದೇಯಿ ಬೈದೇತಿ ಕೋಟಿ ಚೆನ್ನಯ ಯಕ್ಷಗಾನ ಮಂಡಳಿಯ ಸಮಿತಿಯನ್ನು ಪುನರ್ ರಚಿಸಲಾಯಿತು.
ಗೌರವ ಸಂಚಾಲಕರಾಗಿ ಮಸ್ಕತ್ತಿನ ಪ್ರಶಾಂತ ಪೂಜಾರಿ, ಮುಖ್ಯ ಸಂಚಾಲಕರಾಗಿ ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್, ಸಂಚಾಲಕರಾಗಿ ಉಲ್ಲಾಸ್ ಕೋಟ್ಯಾನ್, ಹರೀಶ್ ಕೆ ಪೂಜಾರಿ, ಡಾ.ಸಂತೋಷ್ ಪೇರಂಪಲ್ಲಿ, ನಿತ್ಯಾನಂದ ನಾವರ ಅವರು ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಯಾದರು.
ಕ್ಷೇತ್ರದ ಗೌರವಾಧ್ಯಕ್ಷ ಪಿತಾಂಬರ ಹೇರಾಜೆ, ಗೆಜ್ಜೆಗಿರಿ ಕೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಜೀವ ಪೂಜಾರಿ ಬಿರುವ ಸೆಂಟರ್, ಕಾರ್ಯದರ್ಶಿಗಳಾದ ಉಲ್ಲಾಸ್ ಕೋಟ್ಯಾನ್, ಡಾ. ರಾಜಾರಾಮ್ ಕೆ.ಬಿ., ಕೋಶಾಧಿಕಾರಿ ಮೋಹನ್ ದಾಸ್ ಬಂಗೇರ ವಾಮಂಜೂರು, ಉಪಾಧ್ಯಕ್ಷ ದೀಪಕ್ ಕೋಟ್ಯಾನ್, ನವೀನ್ ಅಮೀನ್ ಕಟಪಾಡಿ, ನವೀನ್ ಸುವರ್ಣ ಸಜೀಪ, ಎಸ್.ಆರ್. ಶೈಲೇಂದ್ರ ಸುವರ್ಣ, ಜಯ ವಿಕ್ರಮ ಕಲ್ಲಾಪು, ಚಂದ್ರಶೇಖರ ಉಚ್ಚಿಲ, ಭಾಸ್ಕರ ಮುಂತಾದ ಪ್ರಮುಖರು ಉಪಸ್ಥಿತರಿದ್ದು, ಗೆಜ್ಜೆಗಿರಿ ಮೇಳ ಕಳೆದ ಮೂರು ವರ್ಷಗಳಿಂದ ನಡೆದು ಬಂದ ದಾರಿ ಅದರ ಆಗು ಹೋಗುಗಳ ಬಗ್ಗೆ ಕೂಲಂಕುಶವಾಗಿ ಚರ್ಚಿಸಿದರು.