ವೇಣೂರು: ಲಯನ್ಸ್ ಕ್ಲಬ್ 2025-26ನೇ ಸಾಲಿನ 44ನೇ ಪದಗ್ರಹಣ ಸಮಾರಂಭವು ಜು.11ರಂದು ವೇಣೂರು ಲಯನ್ಸ್ ಸೇವಾ ಭವನ ನಡೆಯಿತು. ಲಯನ್ಸ್ ಮಾಜಿ ಜಿಲ್ಲಾ ಕೋಶಾಧಿಕಾರಿ ಲಯನ್ ಶ್ರೀನಿವಾಸ್ ಪೂಜಾರಿ ಎಂ.ಜೆ.ಎಫ್. ಪದಗ್ರಹಣ ನೆರವೇರಿಸಿಕೊಟ್ಟರು.
ಕಾರ್ಯಕ್ರಮ ಅಧ್ಯಕ್ಷ ಲಯನ್ ಹರೀಶ್ ಕುಮಾರ್ ಪೊಕ್ಕಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಪ್ರಾಂತೀಯ ಅಧ್ಯಕ್ಷ ಲಯನ್ ಜಗದೀಶ್ ಚಂದ್ರ ಡಿ.ಕೆ.ಎಂ.ಜೆ.ಎಫ್., ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಹಾಗೂ ಪ್ರಾಂತೀಯ ರಾಯಭಾರಿ ಲಯನ್ ಪ್ರವೀಣ್ ಕುಮಾರ್ ಇಂದ್ರ ಪಿ.ಎಂ.ಜೆ.ಎಫ್., ವಲಯಾಧ್ಯಕ್ಷ ಲಯನ್ ಮೇಲ್ವಿನ್ ಸಾಲ್ದಾನ, ಲಯನ್ ಜೋಸ್ಸಿ ಮೆನೇಜಸ್ ಕಾರ್ಯದರ್ಶಿ ಜಯರಾಮ ಹೆಗ್ಡೆ, ಕೋಶಾಧಿಕಾರಿ ದಯಾನಂದ ಭಂಡಾರಿ ಹಾಗೂ ಪ್ರಾಂತ್ಯದ ಎಲ್ಲಾ ಕ್ಲಬ್ ನ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಇತ್ತೀಚಿಗೆ ನಿಧನರಾದ ಕ್ಲಬ್ ನ ಹಿರಿಯ ಸದಸ್ಯ ಲಯನ್ ಡಾ. ರವೀಂದ್ರನಾಥ್ ಪ್ರಸಾದ್ ಅವರಿಗೆ ನುಡಿ ನಮನ ಸಲ್ಲಿಸಲಾಯಿತು. ನುಡಿನಮನ ಕಾರ್ಯಕ್ರಮವನ್ನು ಲಯನ್ ಪ್ರವೀಣ್ ಕುಮಾರ್ ಇಂದ್ರ ನೆರವೇರಿಸಿಕೊಟ್ಟರು.
ನೂತನ ಅಧ್ಯಕ್ಷರಾಗಿ ಲಯನ್ ಸುಧೀರ್ ಭಂಡಾರಿ, ಕಾರ್ಯದರ್ಶಿ ಲಯನ್ ಜಯರಾಮ್ ಹೆಗ್ಡೆ ಹಾಗೂ ಕೋಶಾಧಿಕಾರಿಯಾಗಿ ಲಯನ್ ಸತೀಶ್ ಚಿಗುರು ಹಾಗೂ ಅವರ ತಂಡ ಪ್ರತಿಜ್ನಾವಿಧಿ ಸ್ವೀಕರಿಸಿದರು.
ವೇಣೂರು ಲಯನ್ಸ್ ಕ್ಲಬ್ ಗೆ ಜಗದೀಶ್ ನಾಯಕ್ ಮುಂಕಾಡಿ, ಸುರೇಶ್ ಎನ್. ಪೂಜಾರಿ (ನಿವೃತ್ತ ಸಹಾಯಕ ಅಧಿಕಾರಿ ಆರೋಗ್ಯ ಇಲಾಖೆ) ಅರವಿಂದ ಶೆಟ್ಟಿ ಖಂಡಿಗ, ವಸಂತ ವೇಣೂರು ಹಾಗೂ ಶಶಿಧರ್ ಶೆಟ್ಟಿ ನಾರಡ್ಕ ನೂತನ ಸದಸ್ಯರಾಗಿ ಪ್ರತಿಜ್ಞಾ ವಿಧಿ ಕೈಗೊಂಡು ಕ್ಲಬ್ ಗೆ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ಸುರೇಶ ಎನ್. ಪೂಜಾರಿ (ನಿವೃತ್ತ ಸಹಾಯಕ ಅಧಿಕಾರಿ ಆರೋಗ್ಯ ಇಲಾಖೆ), ಜೇಸಿಂತ ಬ್ರಾಗ್ಸ್ (ನಿವೃತ್ತ ಶಿಕ್ಷಕರು)ವಿಶ್ವನಾಥ್ ಎಂ.(ನಿವೃತ್ತ ಪೋಸ್ಟ್ ಮಾಸ್ಟರ್) ಇವರುಗಳನ್ನು ಸನ್ಮಾನಿಸಲಾಯಿತು.
ಶೈಕ್ಷಣಿಕ ಸಾಧನೆಗೈದ ಶಿಶಿರ್ ಎಸ್. ಶೆಟ್ಟಿ ಹಾಗೂ ವೇಣೂರು ಪರಿಸರದ ಐದು ವಿದ್ಯಾರ್ಥಿಗಳನ್ನು ಸನ್ಮಾನಿಸಿ ದನ ಸಹಾಯ ನೀಡಲಾಯಿತು. ವೇಣೂರು ಸರಕಾರಿ ಪ್ರೌಢ ಶಾಲೆಗೆ ಕಳೆದ ಶೈಕ್ಷಣಿಕ ವರ್ಷದಲ್ಲಿ 100% ಫಲಿತಾಂಶ ಪಡೆದಕ್ಕಾಗಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಗುಂಡೂರಿ ಅಂಗನವಾಡಿ ಕೇಂದ್ರಕ್ಕೆ ಸಮವಸ್ತ್ರ ವಿತರಣೆ, ಬಜಿರೆ ಶಾಲಾ ಅಭಿವೃದ್ಧಿಗೆ ಧನ ಸಹಾಯ ಹಾಗು ಮೂರು ಬಡ ವಿದ್ಯಾರ್ಥಿಗಳಿಗೆ ಧನಸಹಾಯ ನೀಡಲಾಯಿತು. ಕಾರ್ಯಕ್ರಮದಲ್ಲಿ ಪದಗ್ರಹಣ ಅಧಿಕಾರಿ ಹಾಗೂ ನಿರ್ಗಮನ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಲಯನ್ ನಿತೀಶ್ ಎಚ್. ಕಾರ್ಯಕ್ರಮ ನಿರೂಪಿಸಿದರು. ಜಯರಾಮ್ ಹೆಗ್ಡೆ ವಂದಿಸಿದರು.