ಮುಂಡಾಜೆ: ಗ್ರಾಮದ ಕೊಡಂಗೆ ನಿವಾಸಿ ಕಿರಣ್ ಮರಾಠೆ(49 ವ.)ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಜು.15ರಂದು ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ತಾಯಿಯನ್ನು ಅಗಲಿದ್ದಾರೆ. ಕೃಷಿಕರಾಗಿದ್ದ ಅವರು ಎಲೆಕ್ಟ್ರಿಷಿಯನ್ ಕೂಡ ಆಗಿದ್ದರು. ಪೌರೋಹಿತ್ಯವನ್ನು ಮಾಡುತ್ತಿದ್ದು, ವೈದಿಕ ಕಾರ್ಯಕ್ರಮಗಳಿಗೆ ಬೇಕಾಗುವ ಪರಿಕರ ತಯಾರಿಯಲ್ಲಿ ವಿಶೇಷ ಪರಿಣತಿ ಹೊಂದಿದ್ದರು. ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸಾಮಾಜಿಕ ಕಾರ್ಯಕ್ರಮಗಳಲ್ಲೂ ನೇತೃತ್ವ ವಹಿಸುತ್ತಿದ್ದರು.