ಬೆಳ್ತಂಗಡಿ: ಮಿಸೇರಿಯೋರ್ ಪ್ರಾಯೋಜಕತ್ವದಲ್ಲಿ ಕ್ರಾಸ್ ಸಂಸ್ಥೆ ಬೆಂಗಳೂರು ಹಾಗೂ ಡಿ.ಕೆ.ಆರ್.ಡಿ.ಎಸ್. ಬೆಳ್ತಂಗಡಿ ಇದರ ನೇತೃತ್ವದಲ್ಲಿ ಸಿ.ಒ.ಡಿ.ಪಿ ಮಂಗಳೂರು, ಕಿಡ್ಸ್ ಪುತ್ತೂರು ಹಾಗೂ ಸಂಪದ ಉಡುಪಿ ಇವುಗಳ ಸಹಕಾರದಿಂದ ಕ್ಲಸ್ಟರ್ ಮಟ್ಟದ ಲಿಂಗ ಸಮಾನತೆ ಮತ್ತು ನ್ಯಾಯದ ಕುರಿತು ತರಬೇತಿ ಕಾರ್ಯಕ್ರಮವನ್ನು ಜು.15 ಮತ್ತು 16ರಂದು ಎರಡು ದಿನಗಳು ಆಯೋಜಿಸಲಾಗಿದೆ.
ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಮಂಜುಳಾ ಜೋನ್ ಅವರು ವಹಿಸಿದ್ದರು. ಉದ್ಘಾಟನೆಯನ್ನು ಕ್ರಾಸ್ ಸಂಸ್ಥೆ ಬೆಂಗಳೂರು ಇದರ ನಿರ್ದೇಶಕ ಪಾ. ರಿಚರ್ಡ್ ಪಾಯಸ್ ರವರು ನೆರವೇರಿಸಿ ಕಾರ್ಯಕ್ರಮಕ್ಕೆ. ಶುಭ ಹಾರೈಸಿದರು.

ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ಫಾ. ಬಿನೋಯಿ ಎ.ಜೆ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಕ್ರಾಸ್ ಸಂಸ್ಥೆಯ ಮಹಿಳಾ ಸಬಲೀಕರಣ ಯೋಜನೆಯ ರಾಜ್ಯ ಸಂಯೋಜಕಿ ಸಿ. ನ್ಯಾನ್ಸಿ ಲೋಬೊ ಹಾಗೂ ಫಾ. ರಿಚರ್ಡ್ ಪಾಯಸ್ ಅವರು ಲಿಂಗ ಸಮಾನತೆ ಮತ್ತು ನ್ಯಾಯದ ಬಗ್ಗೆ ತರಬೇತಿ ನೀಡಿದರು.

ಕಿಡ್ಸ್ ಸಂಸ್ಥೆ ಒಕ್ಕೂಟ ಪ್ರತಿನಿಧಿಗಳಾದ ಸೀಮಾ, ಐಡಾ, ಸಂಪದ ಮತ್ತು ಅನಿಜಾ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಿಡ್ಸ್ ಸಂಸ್ಥೆಯ ಸಿಬ್ಬಂದಿಗಳು ಪ್ರಾರ್ಥನೆ ಗೀತೆ ಹಾಡಿದರು. ಡಿ.ಕೆ.ಆರ್.ಡಿ.ಎಸ್ ಕಾರ್ಯಕರ್ತೆ ಸುಶೀಲಾ ಎಲ್ಲರನ್ನು ಸ್ವಾಗತಿಸಿದರು. ಸಂಯೋಜಕಿ ಸಿಸಿಲ್ಯಾ ತಾವ್ರೊ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 40 ಮಂದಿ ಭಾಗವಹಿಸಿದ್ದರು. ಮಾರ್ಕ್ ಡಿ ಸೋಜ ವಂದಿಸಿದರು.