ಬೆಳ್ತಂಗಡಿ: ಕಡಬ ತಾಲೂಕು ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಕ್ಕಡ-ಧರ್ಮಸ್ಥಳ ಹೆದ್ದಾರಿಯ ಕೊಕ್ಕಡ ಸಮೀಪದ ಕಾಪಿನಬಾಗಿಲು ಎಂಬಲ್ಲಿ ಜು.14 ರಂದು ರಾತ್ರಿ ಒಂಟಿ ಸಲಗ ಕಾಣಿಸಿಕೊಂಡಿದ್ದು, ಹತ್ತಿರದ ಪರಕೆ ವೆಂಕಟ್ರಮಣ ಭಟ್, ನಾಗೇಶ್ ಭಟ್, ವೆಂಕಟಕೃಷ್ಣ ಭಟ್, ಅಣ್ಣು ಹಾಗೂ ಆಂಬ್ರೋಸ್ ಅವರ ತೋಟ ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಅಡಿಕೆ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿದೆ.