ಜು.13: ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ – ಉಚಿತ ಅರೋಗ್ಯ ತಪಾಸಣಾ ಶಿಬಿರ

0

ಮಡಂತ್ಯಾರು: 2024-2025ನೇ ಸಾಲಿನ ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ ಮತ್ತು ಉಚಿತ ಅರೋಗ್ಯ ತಪಾಸಣಾ ಶಿಬಿರವು ಜು.13ರಂದು ಪೂರ್ವಾಹ್ನ ಗಂಟೆ 11.00ಕ್ಕೆ ಸರಿಯಾಗಿ ಸಂಘದ ಅಧ್ಯಕ್ಷ ಜೋಯೆಲ್ ಗಾಡ್ ಫ್ರೀ ಮೆಂಡೋನ್ಸ ಅವರ ಅಧ್ಯಕ್ಷತೆಯಲ್ಲಿ, ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಸಭಾಭವನದಲ್ಲಿ ಜರಗಲಿದೆ. ಮಹಾಸಭೆಯಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಶೈಕ್ಷಣಿಕ, ಕ್ರೀಡಾ ಸಾಧಕರಿಗೆ, ಕೃಷಿ ಸಾಧನೆ ಮಾಡಿದ ಕೃಷಿಕರಿಗೆ, ಪ್ರಸ್ತುತ ವರ್ಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಹಾಗೂ ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ‘ಫಾದರ್ ಮುಲ್ಲರ್ ಆಸ್ಪತ್ರೆ, ಮಂಗಳೂರು ಫಾ. ಎಲ್.ಎಮ್. ಪಿಂಟೋ ಆಸ್ಪತ್ರೆ, ಬದ್ಯಾರು ಮತ್ತು ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರು ಇದರ ರಾಷ್ಟ್ರೀಯ ಸೇವಾ ಯೋಜನೆ (N.S.S.) ಮತ್ತು ಯೂತ್ ರೆಡ್ ಕ್ರಾಸ್ (Y.R.C) ಸಹಯೋಗದೊಂದಿಗೆ. ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಮಹಿಳೆಯರ ಕ್ಯಾನ್ಸ‌ರ್ ತಪಾಸಣಾ ಶಿಬಿರವು ಬೆಳಿಗ್ಗೆ 9ರಿಂದ ನಡೆಯಲಿದೆ.

ಲಭ್ಯವಿರುವ ವೈದ್ಯರ ಸೇವೆ
ಮೆಡಿಸಿನ್ ವಿಭಾಗ : ಡಾ. ಜೆಫ್ರಿ ಲೂವಿಸ್
ಮೂಳೆ ಚಿಕಿತ್ಸಾ ವಿಭಾಗ : ಡಾ. ವಿಲ್ಟರ್ ಲಿಯಾಂಡರ್ ಕುಟಿನ್ಹ
ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ: ಡಾ.ಜ್ಞಾನೇಶ್ವರಿ ಎಂಡಿ, ಒಜಿಬಿ
ಶಸ್ತ್ರ ಚಿಕಿತ್ಸಾ ಹಾಗೂ ಕ್ಯಾನ್ಸರ್ ಚಿಕಿತ್ಸಾ ವಿಭಾಗ: ಡಾ. ಎಲ್ರೋಯ್ ಸಲ್ದಾನ್ಹ
ಕಿವಿ, ಮೂಗು, ಗಂಟಲು ಚಿಕಿತ್ಸಾ ವಿಭಾಗ: ಡಾ. ದೇವಶ್ಯ
ಮಕ್ಕಳ ಚಿಕಿತ್ಸಾ ವಿಭಾಗ: ಡಾ. ಜೇಸನ್ ಡಿಸೋಜ
ಕಣ್ಣಿನ ಚಿಕಿತ್ಸಾ ವಿಭಾಗ: ಡಾ. ಮಹೇಶ್
ಚರ್ಮರೋಗ ಚಿಕಿತ್ಸಾ ವಿಭಾಗ: ಡಾ. ನಾಗಭೂಷನ್,
ಮನೋರೋಗ ಚಿಕಿತ್ಸಾ ವಿಭಾಗ: ಡಾ. ಕ್ಲಿಂಟನ್ ಕ್ಯಾಸ್ಟಲಿನೋ ಸೇವೆ ನೀಡಲಿದ್ದಾರೆ.

ಲಭ್ಯವಿರುವ ಸೇವೆಗಳು: ಉಚಿತ ವೈದ್ಯರ ಸೇವೆ, ಮಹಿಳೆಯರಿಗೆ ಉಚಿತ ಪ್ಯಾಪ್ ಸ್ಮೀಯರ್ ಪರೀಕ್ಷೆ, ಉಚಿತ ಕ್ಯಾನ್ಸ‌ರ್ ತಪಾಸಣಾ, ಸ್ತನ ಪರೀಕ್ಷೆ, ಉಚಿತ ಫಾ. ಎಲ್.ಎಮ್. ಪಿಂಟೋ ಹೆಲ್ತ್ ಕಾರ್ಡ್,
ಉಚಿತ ಮಧುಮೇಹ ತಪಾಸಣೆ, ಉಚಿತ ಇಸಿಜಿ (ಅಗತ್ಯವಿರುವವರಿಗೆ ಮಾತ್ರ), ಉಚಿತ ಔಷಧಿ, 50% ಹಾರ್ಮೊನ್ ರಕ್ತ ಪರೀಕ್ಷೆ, 50% ವಿಟಮಿನ್ ‘ಡಿ’2 ಮತ್ತು ವಿಟಮಿನ್ ಬಿ 12, 50% ಹಿಮೋಗ್ಲೋಬಿನ್ ಪರೀಕ್ಷೆ, ಉಚಿತ ಕಣ್ಣು ತಪಾಸಣಾ ಶಿಬಿರ, ಶಿಬಿರ ಪ್ರಯುಕ್ತ ರೂ.1500/- ಬೆಲೆಯ ಕನ್ನಡಕಗಳನ್ನು 50% ರಿಯಾಯಿತಿ ದರದಲ್ಲಿ ರೂ. 750/-ಗೆ ವಿತರಿಸಲಾಗುವುದು.

ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು. ಕನ್ನಡಕವನ್ನು (ಐದು ದಿನಗಳಲ್ಲಿ) ವಿತರಿಸಲಾಗುವುದು.

LEAVE A REPLY

Please enter your comment!
Please enter your name here