ಗುರುವಾಯನಕೆರೆ: ವಿಜಯರತ್ನ ಪ್ರಶಸ್ತಿ ಪುರಸ್ಕೃತ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ಪಣೆಜಾಲು ಬಳಿಯ ಗುಂಪಲಾಜೆ ಶ್ರೀ ನಾಗ ರಕ್ತೇಶ್ವರಿ ಸೇವಾ ಟ್ರಸ್ಟ್ ನಿಂದ ಗೌರವಾರ್ಪಣೆ ಮಾಡಲಾಯಿತು.
ಸೇವಾ ಟ್ರಸ್ಟ್ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರೇಮ್ ಶೆಟ್ಟಿ, ಕೋಶಾಧಿಕಾರಿ ಶೈಲೇಶ್ ಗಾಣಿಗ, ಸದಸ್ಯರಾದ ಶಂಕರ್ ಗಾಣಿಗ, ಶಶಿಧರ ಹೆಗ್ಡೆ, ಲೋಕೇಶ್ ಆಚಾರ್ಯ, ಸುರೇಶ್ ಕುಲಾಲ್, ಪ್ರವೀಣ್ ಶೆಟ್ಟಿ, ಸಂಕೇತ್ ಶೆಟ್ಟಿ, ಸಚಿನ್ ಎಸ್. ಶೆಟ್ಟಿ, ದೀಪಕ್ ಶೆಟ್ಟಿ ಉಪಸ್ಥಿತರಿದ್ದರು.