ಆಳ್ವಾಸ್‌ನ 26 ವಿದ್ಯಾರ್ಥಿಗಳು ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ

0

ಬೆಳ್ತಂಗಡಿ: ಮೂಡುಬಿದಿರೆ 2025 ಮೇ ಯಲ್ಲಿ ನಡೆದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಹಿರಿಯ ವಿದ್ಯಾರ್ಥಿಗಳಾದ ಸ್ನೇಹಲ್ ಜೆ., ವಿಲ್ಸನ್, ಈಶ್ವರ್, ಸುಹಾನ್ ಶಿವಯೋಗಿ, ದೀಕ್ಷಾ, ಪವನ್ ಕುಮಾರ್, ಗುರುಪ್ರಸಾದ್ ಹೆಗ್ಡೆ, ಶೆಟ್ಟಿ ನಿಶಾ, ನವೀನ್ ಪೈ, ಶ್ರೀಸಮರ್ಥ್, ಸುಪ್ರಿಯಾ, ಭಾಸ್ಕರ್ ಪೂಜಾರಿ, ಉಮಾಂಗ್ ಇನಾನಿ, ವೆಂಕಟೇಶ್ ಪ್ರಸಾದ್, ಸೃಷ್ಟಿ ಎಸ್. ಪ್ರಭು, ಮಧುರಾ, ಗೌತಮಿ, ರಕ್ಷಾ ಆರ್ ಶೆಟ್ಟಿ, ಸಂಗೀತಾ ಹೆಗ್ಡೆ, ಸೋಮನಾಥ್, ಸ್ವಾತಿ, ಚೈತನ್ಯಾ, ಆದಿತ್ಯಾ ರಾವ್, ಕೌಶಿಕ್ ಯು.ಪಿ., ಅಕ್ಷತ್ ಕೆ ಮತ್ತು ಚಿನ್ಮಯ ಯು.ಎಲ್‌. ಸೇರಿದಂತೆ ಒಟ್ಟು 26 ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿ ಸಾಧನೆ ಮೆರೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ತಿಳಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕಛೇರಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಕಳೆದ ಮೂರು ವರ್ಷಗಳಲ್ಲಿ 115 ವಿದ್ಯಾರ್ಥಿಗಳು ಸಿಎ ಅಂತಿಮ ಪರೀಕ್ಷೆ ಉತ್ತೀರ್ಣರಾಗುವ ಮೂಲಕ ಆಳ್ವಾಸ್‌ನ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

ಪ್ರಾಂಶುಪಾಲ ಡಾ.ಕುರಿಯನ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಮ್ಮದ್ ಸದಾಕತ್ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here