ಬೆಳ್ತಂಗಡಿ: “ಒಬ್ಬ ಸಮರ್ಥ ನಾಯಕ ತಾನು ಬೆಳೆಯುವುದರೊಂದಿಗೆ ಇತರರು ಬೆಳೆಯುವಂತೆ ಪ್ರೇರೇಪಿಸುತ್ತಾನೆ” ಎಂದು ಲುರ್ಡ್ಸ್ ಸೆಂಟ್ರಲ್ ಸ್ಕೂಲ್ ಬಿಜೈ (ಸಿಬಿಎಸ್ಇ) ಪ್ರಾಂಶುಪಾಲ ಗುರು ಜಾನ್ಸನ್ ಸಿಕ್ವೇರಾ ಅಭಿಪ್ರಾಯಪಟ್ಟರು. ಅವರು ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ 2025-26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘ ಹಾಗೂ ವಿವಿಧ ಶೈಕ್ಷಣಿಕ ಸಂಘಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದ ಶಾಲಾ ಮುಖ್ಯೋಪಾಧ್ಯಾಯ ಗುರು ಕ್ಲಿಫರ್ಡ್ ಪಿಂಟೋ ಅವರು ವಿದ್ಯಾರ್ಥಿ ಸಂಘದ ನಾಯಕಿ ಹಾಗೂ ಇತರ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿಯನ್ನು ಭೋದಿಸಿ, ಶುಭ ಹಾರೈಸಿದರು.
ಶಾಲಾ ಸಂಚಾಲಕ ಗುರು ವೋಲ್ಟರ್ ಡಿಮೆಲ್ಲೋ ಅವರು ಮಾತನಾಡುತ್ತಾ, ಈ ವಿದ್ಯಾರ್ಥಿ ಸಂಘವು ಸಮರ್ಥವಾಗಿ ಕಾರ್ಯನಿರ್ವಹಿಸಿ, ಶಾಲೆಯಲ್ಲಿ ಶಿಸ್ತನ್ನು ಕಾಯ್ದುಕೊಳ್ಳಬೇಕೆಂದು ನುಡಿದು ಆಶೀರ್ವದಿಸಿದರು.
ಶಾಲಾ ನಾಯಕಿ ಆಶೆಲ್ ಡಿಸೋಜ, ಶಾಲೆಯ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ನಾನು ಬದ್ಧರಾಗಿದ್ದೇನೆ ಎಂದು ಆಶ್ವಾಸನೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಶೈಕ್ಷಣಿಕ ಸಂಘಗಳ ಹಾಗೂ ವಿವಿಧ ಆಟೋಟ ತಂಡಗಳ ನಾಯಕರಿಗೆ, ವಿವಿಧ ತರಗತಿಯ ನಾಯಕರಿಗೆ ಗುರುತು ಫಲಕಗಳನ್ನು ನೀಡಿ ಅಭಿನಂದಿಸಲಾಯಿತು.
ಸಹ ಶಿಕ್ಷಕಿ ವಿನೀತಾ ಮೋರಸ್ ಸ್ವಾಗತಿಸಿದರು. ಸಹಶಿಕ್ಷಕಿ ಜೊನಿಟ ಕೊರೆಯ ಕಾರ್ಯಕ್ರಮವನ್ನು ನಿರೂಪಿಸಿದರು. ಸಹಶಿಕ್ಷಕಿಯರಾದ ಬ್ಲೆಂಡಿನ್ ರೋಡ್ರಿಗಸ್, ಲೋನ ಲೋಬೋ, ಶಾಂತಿ ಪಿರೇರ, ಸರಿತಾ ರೋಡ್ರಿಗಸ್, ಪ್ರಭಾ ಗೌಡ, ಜೊನಿಟ ಕೊರೆಯ ಹಾಗೂ ವಿನೀತಾ ಮೋರಸ್ ಸಹಕರಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಸಮಾಪ್ತಿಗೊಂಡಿತು. ವಿದ್ಯಾರ್ಥಿನಿಯಾದ ವಿಯೋಲಾ ಡಿಸೋಜ ವಂದಿಸಿದರು.