ಶಿಬಾಜೆ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ ಕುರುಂಜ ಅಣ್ಣು ಗೌಡ(92) ನಿಧನರಾದರು. ಅಣ್ಣು ಗೌಡ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಸಕ್ರಿಯವಾಗಿದ್ದುಕೊಂಡು ಅನೇಕ ಸಮಾಜ ಸೇವೆಗಳನ್ನು ಮಾಡಿದ್ದರು. ಬಿಜೆಪಿಯ ಸಕ್ರಿಯ ಕಾರ್ಯಕರ್ತರೂ ಆಗಿದ್ದ ಇವರು ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಯಕ್ಷಗಾನ ತಾಳಮದ್ದಳೆ ನಡೆಸುತ್ತಿದ್ದರು.
ಗ್ರಾಮದಲ್ಲಿ ಭಜನೆ ಆರಂಭಿಸಿದ ಮೊದಲಿಗರಲ್ಲಿ ಒಬ್ಬರಾಗಿದ್ದ ಇವರು ಪತ್ನಿ ಅಕ್ಕಮ್ಮ, ಮಕ್ಕಳಾದ ಜಾನಕಿ, ಶೀಲಾವತಿ, ಚಿನ್ನಮ್ಮ, ವಸಂತಿ, ರೇವತಿ, ಸುಕನ್ಯ ಆನಂದ ಗೌಡ ಮತ್ತು ರಮೇಶ್ ಕುರುಂಜ ಅವರನ್ನು ಅಗಲಿದ್ದಾರೆ.