ಬೆಳ್ತಂಗಡಿ: ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯ ಮಂತ್ರಿಮಂಡಲದ ಉದ್ಘಾಟನಾ ಸಮಾರಂಭವು ಶಾಲಾ ಸಭಾಭವನದಲ್ಲಿ ನೆರವೇರಿತು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಸೀರ್ ಅಹಮದ್ ಖಾನ್ ಹಾಗೂ ಶಾಲಾ ಮುಖ್ಯ ಶಿಕ್ಷಕ ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು. ಆಯ್ಕೆಗೊಂಡ ಎಲ್ಲಾ ಪ್ರತಿನಿಧಿಗಳಿಗೆ ಶಾಲಾ ಮುಖ್ಯೋಪಾಧ್ಯಾಯರು ಪ್ರತಿಜ್ಞಾವಿಧಿಯನ್ನು ಭೋದಿಸಿದರು.
ಶಾಲಾ ವಿದ್ಯಾರ್ಥಿ ನಾಯಕಿಯಾಗಿ ನುಮಾಸಾರ, ಉಪನಾಯಕನಾಗಿ ಮೊಹಮ್ಮದ್ ಫಹಾದ್ ಆಯ್ಕೆಯಾದರು.
ಸಭಾಧ್ಯಕ್ಷರಾಗಿ ಸಮ್ರಿನ್ ಬಾನು, ಶಿಕ್ಷಣ ಮಂತ್ರಿಯಾಗಿ ಅಮ್ನ , ಶಿಸ್ತು ಮಂತ್ರಿಗಳಾಗಿ ಪವನ್ ಮತ್ತು ಅವನೀಶ್, ಭಾಷಾ ಮಂತ್ರಿಗಳಾಗಿ ಶುದ್ದಿ ಮತ್ತು ಅನುಷ್ಕಾ, ಸಾಂಸ್ಕೃತಿಕ ಮಂತ್ರಿಗಳಾಗಿ ಆಶಿಕಾ, ಮಹಾನ್ ಮತ್ತು ಇಕ್ರ, ಕ್ರೀಡಾ ಮಂತ್ರಿಗಳಾಗಿ ಅಸ್ಮಿಯ, ಹನಾನ್ ಮತ್ತು ಶಾಜೀನ್, ವಿರೋಧ ಪಕ್ಷದ ನಾಯಕರಾಗಿ ಫಾತಿಮಾ ರಿಫಾ ಮತ್ತು ಅಶ್ವಿತ್, ಸದಸ್ಯರುಗಳಾಗಿ ಮುಫೀದ್, ಕಲೀಲಾ, ಅನಿಕ, ಶಾಹೀನಾ ಹಾಗೂ ತ್ರಿಷಾ ಪ್ರಮಾಣವಚನ ಸ್ವೀಕರಿಸಿದರು.
ಪ್ರಭಾಕರ ಶೆಟ್ಟಿ ಅವರು ವಿದ್ಯಾರ್ಥಿ ಸಂಘದ ಮಹತ್ವವನ್ನು ತಿಳಿಸಿದರು. ಸಹ ಶಿಕ್ಷಕಿ ನಿಶ್ಮಿತಾ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.