ಬೆಳ್ತಂಗಡಿ: ಸರಕಾರಿ ಶಾಲೆಗಳಲ್ಲಿ ಅನೇಕ ಸೌಲಭ್ಯ, ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು ಉತ್ತಮ ಪರಿಸರದ ವಾತಾವರಣ ಇದೆ. ಇದರಿಂದ ಮಕ್ಕಳಿಗೆ ಶಿಕ್ಷಣದ ಜೊತೆ ಉತ್ತಮ ಅರೋಗ್ಯ ಸಿಗಲು ಸಾದ್ಯ. ಕೆಲವೊಂದು ಸೌಲಭ್ಯಗಳ ಕೊರತೆ ಇದ್ದು ಇದನ್ನು ಊರವರು, ದಾನಿಗಳು ನೀಡಲು ಮುಂದಾಗಬೇಕು. ಇಂದು ರಾಜಕೇಸರಿ ಟ್ರಸ್ಟ್ ಬ್ಯಾಗ್, ಪುಸ್ತಕ, ಇನ್ನಿತರ ಕೊಡುಗೆ ನೀಡಿ ಸರಕಾರಿ ಶಾಲಾ ಮಕ್ಕಳ ಭವಿಷ್ಯ ರೂಪಿಸುತ್ತಿದೆ. ಸರಕಾರಿ ಶಾಲಾ ಸೇವೆ ದೇವರ ಸೇವೆ ಮಾಡಿದಂತೆ ಎಂದು ದಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಹೇಳಿದರು. ಅವರು ಜು. 6ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿನಬೈಲು ಸವಣಾಲಿನ ಮಕ್ಕಳಿಗೆ ರಾಜಕೇಸರಿ ಟ್ರಸ್ಟ್ ವತಿಯಿಂದ ಉಚಿತ ಬ್ಯಾಗ್, ಪೆನ್ನು ವಿತರಿಸಿ ಮಾತನಾಡಿ ಹಿಂದೆ ಸರಕಾರಿ ಶಾಲೆಯಲ್ಲಿ ಕಲಿತವರು ಅನೇಕರು ದೊಡ್ಡ ದೊಡ್ಡ ಅಧಿಕಾರಗಳು, ರಾಜಕಾರಣಿಗಳು , ವಿದ್ವಾಂಸರಾಗಿ ಬೆಳೆದಿದ್ದಾರೆ. ಅದ್ದರಿಂದ ಸರಕಾರಿ ಶಾಲೆ ಎಂಬ ಕೀಳರಿಮೆ ಬೇಡ. ಶಾಲೆಯ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಇದ್ದು ಊರವರು ಸೇರಿ ಮಾದರಿ ಕಾರ್ಯಕ್ರಮ ಮಾಡಬೇಕು. ನಾನು ನೆರವನ್ನು ನೀಡಲು ಸಿದ್ದ ಎಂದರು.
ಪತ್ರಕರ್ತ ಮನೋಹರ್ ಬಳಂಜ ಮಾತನಾಡಿ ಸರಕಾರಿ ಶಾಲೆ ಬೆಳವಣಿಗೆ ಪೋಷಕರು, ಹಳೆವಿದ್ಯಾರ್ಥಿಗಳ ಕೊಡುಗೆ ಅಗತ್ಯ. ಪೋಷಕರು ನಿರಂತರ ಶಾಲೆಗೆ ಬೇಟಿ ನೀಡುವ ಮೂಲಕ ಮಕ್ಕಳ ಶಿಕ್ಷಣದ ಕಡೆ ಮತ್ತು ಶಾಲೆಯ ಬೆಳವಣಿಗೆಗೆ ಗಮನ ಹರಿಸಬೇಕು ಎಂದರು.

ಶಾಲಾ ಅಭಿವೃದ್ಧಿ ಸಮಿತಿ ಅದ್ಯಕ್ಷ ಪ್ರಭಾಕರ್ ಭಟ್ ಅದ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಭಾಗದ ಶಾಲೆಯನ್ನು ಗುರುತಿಸಿ ರಾಜಕೇಸರಿ ಟ್ರಸ್ಟ್ ನೆರವು ನೀಡಲು ಮುಂದಾಗಿದ್ದು ಮಕ್ಕಳಿಗೆ ಅನುಕೂಲವಾಗಿದೆ. ಇಂತಹ ಸಂಘಟನೆಗಳಿಂದ ಸರಕಾರಿ ಶಾಲೆ ಬೆಳೆಯಲು ಸಾದ್ಯ ಎಂದರು.

ಕಾರ್ಯಕ್ರಮದಲ್ಲಿ ಮೇಲಂತಬೆಟ್ಟು ಗ್ರಾ.ಪಂ. ಉಪಾಧ್ಯಕ್ಷ ಲೋಕನಾಥ್ ಶೆಟ್ಡಿ, ರಾಜಕೇಸರಿ ಟ್ರಸ್ಟ್ ನ ಸ್ಥಾಪಕಾದ್ಯಕ್ಷ ದೀಪಕ್ ಜಿ., ತಾಲೂಕು ಅಧ್ಯಕ್ಷ ಸತೀಶ್ ಕಂಗಿತ್ತಿಲ್, ಗೌರವಾಧ್ಯಕ್ಷ ಸಂದೀಪ್ ಬೆಳ್ತಂಗಡಿ , ಪ್ರೇಮ್ ರಾಜ್ ಲಾಯಿಲ, ಪದಾಧಿಕಾರಿಗಳಾದ ಜಗದೀಶ್ ಲಾಯಿಲ, ಶರತ್ ಕರಾಯ, ದೇವರಾಜ್ ಪೂಜಾರಿ, ವಿನೋದ್ ಲಾಯಿಲ ಉಪಸ್ಥಿತರಿದ್ದರು. ಪ್ರಭಾರ ಮುಖ್ಯೋಪಾಧ್ಯಾಯಿನಿ ನಮಿತಾ ಆರ್. ಸ್ವಾಗತಿಸಿದರು. ಸಹಶಿಕ್ಷಕಿ ಶ್ಯಾಮಲಾ ಕೆ. ನಿರೂಪಿಸಿದರು. 49 ಮಕ್ಕಳಿಗೆ ಉಚಿತ ಬ್ಯಾಗ್, ಪೆನ್ ಕಿಟ್ ವಿತರಿಸಲಾಯಿತು. ಸಹಶಿಕ್ಷಕ ವಸಂತ ಗುಡಿಗಾರ್ ವಂದಿಸಿದರು.