ಸುದ್ದಿ ವರದಿ ಬೆನ್ನಲ್ಲೇ ಕುಪ್ಪೆಟ್ಟಿ-ಉಪ್ಪಿನಂಗಡಿ ತೇಪೆ ಕಾರ್ಯ ಆರಂಭ-ಇದು ಕಣ್ಕಟ್ ನಾಟಕ ಆಗಬಾರದು- ಎರಡು ದಿನದಲ್ಲಿ ಮತ್ತೆ ಮೊದಲಿನಂತಾಗಬಾರದು ರಸ್ತೆ ಅಂತಿದ್ದಾರೆ ಜನ

0

ಕಲ್ಲೇರಿ: ಕುಪ್ಪೆಟ್ಟಿ-ಉಪ್ಪಿನಂಗಡಿ ಹೊಂಡಾಗುಂಡಿ ರಸ್ತೆಯ ಬಗ್ಗೆ ಸುದ್ದಿ ಬಿಡುಗಡೆ ಮುಖಪುಟದಲ್ಲಿ ಪ್ರಕಟಿಸಿದ “ಗುರುವಾಯನಕೆರೆಯಿಂದ ಪಿಲಿಗೂಡು ರಸ್ತೆ ವಾವ್ ವಾವ್, ಅಲ್ಪರ್ದ್ ಉಬರ್ ಮುಟ್ಟ ಅಯ್ಯಯ್ಯೋ ಯಾವ್ ಯಾವ್ ” ವರದಿ ಸಂಚಲನ ಉಂಟು ಮಾಡಿದ್ದು, ನಿನ್ನೆಯಷ್ಟೇ ವೀಡಿಯೋ ಶೂಟ್ ಕೂಡ ಮಾಡಲಾಗಿದೆ.

ಇದರಿಂದ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಕಲ್ಲೇರಿಯ ಶಿವಗಿರಿ ಸಮೀಪದ ಗರೋಡಿಯಲ್ಲಿ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದೆ. ಆದರೆ ಇದು ಕಣ್ಕಟ್ ನಾಟಕ ಆಗಿ,ಕೇವಲ ಒಂದೆರಡು ಕಡೆ ಗುಂಡಿ ಮುಚ್ಚಿದಂತೆ ಆಗಬಾರದು, ಎಲ್ಲಾ ಗುಂಡಿ ಮುಚ್ಚಲೇಬೇಕು, ಅಲ್ಲದೇ ಗುಂಡಿ ಮುಚ್ಚುತ್ತಿರುವ ರೀತಿ ನೊಡಿದ್ರೆ ಎರಡು ದಿನದಲ್ಲಿ ಮತ್ತೆ ರಸ್ತೆ ಪರಿಸ್ಥಿತಿ ಶೋಚನೀಯ ಆಗಬಹುದು, ಹೀಗಾಗಬಾರದು ಅಂತ ಜನರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here