ಮಡಂತ್ಯಾರು: ಜು.28ರಂದು ಶಿಶು ವಿಹಾರ ಮಹಿಳಾ ಮಂಡಲ ಜೆಸಿ ಸಮ್ಮಿಲನ ನಡೆಯಿತು. ಜೆಸಿ ಭಾರತಿ ಸುರೇಶ್ ಅಥಿತಿಗಳನ್ನು ವೇದಿಕೆಗೆ ಆಹ್ವಾನಿಸಿದರು.
ಜೆಸಿ ಸದಸ್ಯರೆಲ್ಲರೂ ಜೆಸಿವಾಣಿ ವಾಚಿಸಿದರು, ಅಧ್ಯಕ್ಷೆ ಜೆಸಿ ಅಮಿತಾ ಅಶೋಕ್ ಅಥಿತಿಗಳನ್ನು ವೇದಿಕೆಗೆ ಸ್ವಾಗತಿಸಿದರು. ಕಾರ್ಯಕ್ರಮ ಉದ್ಘಾಟಕರು ಘಟಕದ ಪೂರ್ವಧ್ಯಕ್ಷರು ಜೆಸಿ ಬಿ. ಜಯಂತ ಶೆಟ್ಟಿ ಬಂಡಾರಿಗುಡ್ಡೆ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಶುಭವನ್ನು ಹಾರೈಸುವುದರೊಂದಿಗೆ ಹಿಂದಿನ ಘಟಕದ ಕಾರ್ಯಕ್ರಮಕ್ಕೂ ಈಗಿರುವ ಸಂಸ್ಥೆಯ ಕಾರ್ಯಕ್ರಮಕ್ಕೂ ಹೊಂದಾಣಿಕೆಯ ವಿಚಾರಗಳ ಬಗ್ಗೆ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಜೆಸಿಐ ವಲಯ 15ರ ಉಪಾಧ್ಯಕ್ಷ ಜೆಎಫ್ಎಂ ರಂಜಿತ್ ಎಚ್. ಡಿ. ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜೂ. ತಿಂಗಳ ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿಯನ್ನು 10ಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿದ ಸ್ವರ್ಣ ಸಂಜೀವಿನಿ ಸೇವಾ ಟ್ರಸ್ಟ್ ಮಡವು ಅಧ್ಯಕ್ಷ ಸಚಿನ್ ಸುವರ್ಣ ಇವರಿಗೆ ನೀಡಿ ಗೌರವಿಸಲಾಯಿತು.
ಜೆಸಿ ಮನೋಜ್ ಮಾಯಿಲೋಡಿ ಸನ್ಮಾನಿತರ ಪರಿಚಯ ವಾಚಿಸಿದರು. ಸನ್ಮಾನಿತ ಸಚಿನ್ ಸುವರ್ಣ ಕಾರ್ಯಕ್ರಮದ ಬಗ್ಗೆ ಸಂತೋಷ ವ್ಯಕ್ತ ಪಡಿಸಿದರು. ಜೆಸಿಐ ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಗೊಂಡ ಅಶ್ವಿನಿ ಅವರಿಗೆ ವಲಯ ಉಪಾಧ್ಯಕ್ಷರು ಪ್ರಮಾಣ ವಚನ ಬೋದಿಸಿದರು.
ಅಧ್ಯಕ್ಷೆ ಜೇಸಿ ಅಮಿತ ಅಶೋಕ್ ಗುಲಾಬಿ ಹೂ ಕೊಟ್ಟು ಬರಮಾಡಿಕೊಂಡರು. ವಲಯ ನಿರ್ದೇಶಕ ಹೆಚ್. ಜಿ. ಎಫ್ ಅಶೋಕ್ ಗುಂಡಿಯಲ್ಕ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಅಧ್ಯಕ್ಷ ಅಧ್ಯಕ್ಷೀಯ ನೆಲೆಯಲ್ಲಿ ಹಿತ ನುಡಿಗಳನ್ನು ನೀಡಿದರು. ಮತ್ತು ಕಾರ್ಯದರ್ಶಿ ಜೇಸಿ ಆದರ್ಶ ಹಟ್ಟತ್ತೊಡಿ ಧನ್ಯವಾದವಿತ್ತರು.
ಜೆಸಿ ತುಳಸಿ ದಾಸ್ ಪೈ ಮನೋರಂಜನೆಯ ಆಟಗಳನ್ನು ಆಡಿಸಿ ವಿಜೇತರಿಗೆ ಬಹುಮಾನವಿತ್ತರು. ಜೇಸಿ ವಿಕೇಶ್ ಮಾನ್ಯ ಹಾಗೂ ಜೇಸಿ ಅಜಯ್ ಜೆ. ಶೆಟ್ಟಿ ಅವರ ಆತಿಥ್ಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ವಿಶೇಷ ಧನ್ಯವಾದಗಳನ್ನು ಸಮರ್ಪಿಸಲಾಯಿತು.