ಧರ್ಮಸ್ಥಳ: ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ನವೀನ್ ಗೌಡ 200 w dd ಎಂಬ ಖಾತೆಯಲ್ಲಿ ಅಶ್ಲೀಲವಾಗಿ ಪದಬಳಕೆ ಮಾಡಿದ್ದಾರೆ ಎಂದು ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಜು.1 ರಂದು ಪ್ರಕರಣ ದಾಖಲಾಗಿದೆ.
ಪ್ರಕರಣದ ಸಾರಾಂಶ: ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ಪುರಂದರ ಗೌಡ ಎಂಬ ವ್ಯಕ್ತಿ ಕೃಷಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಫೇಸ್ ಬುಕ್ ಖಾತೆಯನ್ನು ಓಪನ್ ಮಾಡಿ ನೋಡಿದಾಗ ಅಶ್ಲೀಲ ಪದ ಬಳಕೆ ಮಾಡಿ ಮಹೇಶ್ ಶೆಟ್ಟಿ ತಿಮರೋಡಿ ಸಾಕಿಕೊಂಡಿದ್ದಾನೆ ನೋಡಿ” ಎಂದು ಸಾರ್ವಜನಿಕವಾಗಿ ಎಲ್ಲರೂ ಬಳಸುವ ಫೇಸ್ಬುಕ್ ಖಾತೆಯಲ್ಲಿ ಇಂತಹ ಪದ ಬಳಕೆ ಮಾಡಿದ ಖಾತೆಯ ವಿರುದ್ಧ ಪುರಂದರ ಗೌಡ ನೀಡಿದ ದೂರಿನ ಮೇಲೆ ಧರ್ಮಸ್ಥಳ ಪೋಲಿಸರು ಪ್ರಕರಣದ ದಾಖಲಿಸಿಕೊಂಡಿದ್ದಾರೆ.