ಅರಸಿನಮಕ್ಕಿ :ಜೂ. 28ರಂದು ಅಡಿಕೆಗೆ ಔಷದಿ ಸಿಂಪಡಿಸುತ್ತಿರುವ ವೇಳೆ ವಿದ್ಯುತ್ ಅವಘಡದಿಂದ ಅಕಾಲಿಕವಾಗಿ ನಿಧನರಾದ ಉಡ್ಯೆರೆ ಕೃಷ್ಣಪ್ಪ ಕುಲಾಲ್ ರಿಗೆ ಕುಲಾಲರ ಸಂಘದಿಂದ ಸಾರ್ವಜನಿಕ ಶ್ರದ್ದಾಂಜಲಿ ಸಭೆ ಜು. 1ರಂದು ಅರಸಿನಮಕ್ಕಿ ಕುಲಾಲರ ಸಭಾಭವನದಲ್ಲಿ ನೆರವೇರಿತು.

ಅರಸಿನಮಕ್ಕಿ ಪರಿಸರದಲ್ಲಿ ಉಡ್ಯೆರೆ ಕೃಷ್ಣಪ್ಪ ಕುಲಾಲ್ ಎಲ್ಲರಿಗೂ ಬೇಕಾದ ವ್ಯಕ್ತಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟ ದ ಅಧ್ಯಕ್ಷರಾಗಿ, ಇಲ್ಲಿಯ ಕುಲಾಲ ರ ಸಂಘದ ಅಧ್ಯಕ್ಷರಾಗಿ, ಕೋಶಧಿಕಾರಿಯಾಗಿ, ಜೊತೆ ಕಾರ್ಯದರ್ಶಿಯಾಗಿ ಉಪಾಧ್ಯಕ್ಷರಾಗಿ, ಕಟ್ಟಡನಿಧಿಯ ಅಧ್ಯಕ್ಷರಾಗಿ, ಪ್ರಸ್ತುತ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು ಇದಲ್ಲದೆ ಪ್ರಸ್ತುತ ಬೂಡುಮುಗೇರು ದೇವಳದ ಕಾರ್ಯದರ್ಶಿಯಾಗಿ,ಕಾಪು ಉಪ್ಪರಡ್ಕ ದೈವಸ್ಥಾನದ ಆಡಳಿತ ಸಮಿತಿಯ ಸದಸ್ಯರಾಗಿ, ಅರಸಿನಮಕ್ಕಿ ರಬ್ಬರ್ ಸೊಸೈಟಿ ಅಧ್ಯಕ್ಷರಾಗಿ, ಲತೇಶ್ ಯಕ್ಷಗಾನ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅದಲ್ಲದೆ ಅರಸಿನಮಕ್ಕಿ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಸ್ಥಳೀಯ ಮೂಕಾಂಬಿಕಾಗಿರಿ ದೇವಳದ ಲೆಕ್ಕ ಪತ್ರ ನಿರ್ವಹಣೆಯನ್ನು ಇವರೇ ನಿರ್ವಹಿಸುತ್ತಿದ್ದರು ಎಂದು ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಧರ್ಮರಾಜ್ ಗೌಡ ಅಡ್ಕಾಡಿ ಶ್ರದ್ದಾಂಜಲಿ ಸಭೆಯಲ್ಲಿ ತಿಳಿಸಿದರು.
ಕುಲಾಲರ ಸಂಘದ ಅಧ್ಯಕ್ಷ ಗಂಗಾಧರ್ ಕುಲಾಲ್ ಮಾತನಾಡಿ ನನಗಿಂತ ಕಿರಿಯ ಆದರೆ ಪ್ರತಿಯೊಂದಕ್ಕೂ ಸಲಹೆ ಕೃಷ್ಣಪ್ಪರ ಬಳಿ ಪಡೆಯುತ್ತಿದ್ದೆ ನಮ್ಮ ಸಂಘಕ್ಕಾಗಲಿ ಊರಿನ ಇತರೆ ಸಂಘ ಸಂಸ್ಥೆಗಾಗಲಿ ಹಗಲಿರುಳು ದುಡಿದ ಜೀವನ ಅವರದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದುಃಖ ತಪ್ತರಾದರು.

ಕೃಷ್ಣಪ್ಪ ಕುಲಾಲ್ ಜೊತೆ ಅತೀವ ಒಡನಾಟ ಹೊಂದಿದ್ದ ಅಬ್ರಹಾಂ ಮಾತನಾಡಿ ನಾನು 33ವರ್ಷಕ್ಕಿಂತಲೂ ಹೆಚ್ಚು ಕಾಲ ಒಡನಾಟ ಹೊಂದಿದ್ದೆ.ಅವರ ತುಂಬು ಕುಟುಂಬಕ್ಕೆ ಅವರೇ ಮಾರ್ಗದರ್ಶಕರು ಎಂದು ಹೇಳಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಊರಿನ ಹಿರಿಯರಾದ ಕಾಪು ಉಪ್ಪರಡ್ಕ ದೈವಸ್ಥಾನದ ಅಧ್ಯಕ್ಷ ದರ್ಣಪ್ಪ ಗೌಡ, ಲತೇಶ್ ಯಕ್ಷಗಾನ ಕೇಂದ್ರದ ಸ್ಥಾಪಕ ಸುಂದರ ಗೌಡ ಮುಳಿತ್ತಡ್ಕ, ಕುಲಾಲರ ಸಂಘದ ಪ್ರಧಾನ ಕಾರ್ಯದರ್ಶಿ ಯು. ಸಿ. ಕುಲಾಲ್, ಸಂಘದ ಸದಸ್ಯರು, ಊರಿನ ಹಿರಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತ, ನಿರೂಪಣೆ, ಧನ್ಯವಾದವನ್ನು ಪ್ರವೀಣ್ ಕುಲಾಲ್ ನೆರವೇರಿಸಿದರು.