ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ನಾಯಕ ಸ್ಥಾನಕ್ಕೆ ಚುನಾವಣೆ

0

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ನಾಯಕ ಮತ್ತು ಉಪನಾಯಕ ಸ್ಥಾನಕ್ಕೆ ಮತದಾನವು ಜೂ. 19ರಂದು ನಡೆಯಿತು. ಈ ಶೈಕ್ಷಣಿಕ ವರ್ಷದ ಮತದಾನವು ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಮಾದರಿ (EVM) ಮೂಲಕ ನೆರವೇರಿತು. ಹೋಲಿ ರೇಡಿಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಮುಖ್ಯೋಪಾಧ್ಯಾಯ ಸ್ವಾ| ಕ್ಲಿಫರ್ಡ್ ಸೈಮನ್ ಪಿಂಟೋ ಹಾಗೂ ಸಹಶಿಕ್ಷಕಿಯರಾದ ಪ್ರೀತ ಡಿಸೋಜ ಮತ್ತು ವಿನಿತಾ ಮೋರಸ್ ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ನಲ್ಲಿ ಓಟು ಹಾಕುವ ಬಗ್ಗೆ ಮಾರ್ಗದರ್ಶನ ನೀಡಿ ಸಹಕರಿಸಿದರು.

ಶಾಲಾ ನಾಯಕನ ಸ್ಥಾನಕ್ಕೆ 10ನೇ ತರಗತಿಯ ಒಟ್ಟು 2 ವಿದ್ಯಾರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದರು. ಉಪನಾಯಕ ಸ್ಥಾನಕ್ಕೆ 9ನೇ ತರಗತಿಯ ಒಟ್ಟು 8 ವಿದ್ಯಾರ್ಥಿಗಳು ನಾಮಪತ್ರವನ್ನು ಸಲ್ಲಿಸಿದರು. 10ನೇ ತರಗತಿಯ ಜೇಡನ್ ಕೀತ್ ಡಿಕುನ್ಹ ಶಾಲಾ ನಾಯಕನಾಗಿ ಹಾಗೂ 9ನೇ ತರಗತಿಯ ವೈಭವ್ ಆರ್. ಉಪನಾಯಕನಾಗಿ ಬಹುಮತದಿಂದ ಆಯ್ಕೆಯಾದರು. ಶಾಲಾ ಮುಖ್ಯೋಪಾಧ್ಯಾಯ ಸ್ವಾ| ದೀಪಕ್ ಲಿಯೋ ಡೇಸ ಈ ಶೈಕ್ಷಣಿಕ ವರ್ಷದ ಮತದಾನವು ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಮೂಲಕ ನಡೆಸಲು ಉತ್ತೇಜಿಸಿದರು. ಶಾಲಾ ಶಿಕ್ಷಕ ವೃಂದದವರು, ಚುನಾವಣೆಯು ಉತ್ತಮವಾಗಿ ನೆರವೇರಲು ಸಹಕರಿಸಿದರು. ಶಾಲಾ ಸ್ಕೌಟ್ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ಬರಲು ಶಿಸ್ತನ್ನು ಕಾಪಾಡಿದರು.

LEAVE A REPLY

Please enter your comment!
Please enter your name here