ಪಿಲ್ಯ: ಕೂಲಿ ಕಾರ್ಮಿಕ ಮನೆಯ ಅಂಗಳದಲ್ಲಿ ಬೆಳಿಗ್ಗೆ 5ಗಂಟೆ ಸುಮಾರಿಗೆ ಆಕಸ್ಮಿಕವಾಗಿ ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಜೂ.21ರಂದು ಅಳದಂಗಡಿಯ ಪಿಲ್ಯ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಪಿಲ್ಯ ಗ್ರಾಮದ ರಾಜೇಶ್ ಮೂಲ್ಯ (36ವ) ಎಂದು ಗುರುತಿಸಲಾಗಿದೆ. ಈ ಬಗ್ಗೆ ವೇಣೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಯಿ ಚಂದ್ರವತಿ, ಸಹೋದರರಾದ ಯೋಗೀಶ್, ಹರೀಶ್ ಮತ್ತು ನಾಗೇಶ್ ಆವರನ್ನು ಅಗಲಿದ್ದಾರೆ.