ಅರಸಿನಮಕ್ಕಿ: ಶಿವಳ್ಳಿ ಸಮಾಜ ಅರಸಿನಮಕ್ಕಿ ವಲಯದ ಸಭೆಯು ಶಿಬಾಜೆ ಪುರಂದರ ರಾವ್ ಅವರ ಮನೆಯಲ್ಲಿ ಜರಗಿತ್ತು. ವಲಯದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪುರಂದರ ರಾವ್ ಶಿಬಾಜೆ, ಕಾರ್ಯದರ್ಶಿಯಾಗಿ ಬಿ.ಜಯರಾಮ ನೆಲ್ಲಿತ್ತಾಯ ಶಿಶಿಲ, ಜೊತೆ ಕಾರ್ಯದರ್ಶಿಯಾಗಿ ವಿಶು ಕುಮಾರ್ ಪೆರಡೆಲು, ಉಪಾಧ್ಯಕ್ಷರಾಗಿ ಎಮ್.ಪಿ. ರಾಜಗೋಪಾಲ ರಾವ್ ಪೆರಡೆಲು ಮತ್ತು ದಿವಾಕರ ಹೆಬ್ಬಾರ್ ಮಾಂಜಿಲು, ಸಲಹೆಗಾರರಾಗಿ ಶ್ರೀಕರ ರಾವ್ ಅಡ್ಕಾಡಿ, ಮಹಿಳಾ ಘಟಕದ ಅಧ್ಯಕ್ಷೆಯಾಗಿ ವಿಜಯ ಲಕ್ಷ್ಮಿ, ಕಾರ್ಯದರ್ಶಿಯಾಗಿ ರೇಣುಕಾ, ಸಲಹೆಗಾರರಾಗಿ ಲೀಲಾ ಕೈರಂಡರವರನ್ನು ಆಯ್ಕೆ ಮಾಡಲಾಯಿತು.