





ಉಜಿರೆ: ಬೆಳ್ತಂಗಡಿ ತಾಲೂಕಿನ ಪ್ರಶಸ್ತಿ ವಿಜೇತ ಮಂದಾರ ಕಲಾವಿದರು ಉಜಿರೆ ತಂಡದ ವತಿಯಿಂದ ಇತ್ತೀಚೆಗೆ ಸ್ವರ್ಗಸ್ತರಾದ ಮುಂಡಾಜೆಯ ಸಕಲಕಲಾ ವಲ್ಲಭ ಜಯರಾಮ್ ಕೆ. ನಾಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿ ನಮನ ಸಲ್ಲಿಸಲಾಯಿತು. ಅದೇ ರೀತಿ ಅಹಮ್ಮದ್ ಬಾದ್ ವಿಮಾನ ದುರಂತದಲ್ಲಿ ಮಡಿದ ಜನರಿಗೆ ಮೌನ ಪ್ರಾರ್ಥನೆ ಸಲ್ಲಿಸಿ ಸಂತಾಪ ಸೂಚಿಸಲಾಯಿತು. ತಂಡದ ಅಧ್ಯಕ್ಷ ಗುಣಪಾಲ್ ಎಂ.ಎಸ್., ಸಂಚಾಲಕ ಪ್ರವೀಣ್ ಉಜಿರೆ ಹಾಗೂ ತಂಡದ ಸದಸ್ಯರು ಹಾಜರಿದ್ದರು.









