ನಿಡ್ಲೆ: ಸರ್ಕಾರಿ ಪ್ರೌಢಶಾಲೆ ನಿಡ್ಲೆ ಮತ್ತು ನಿಡ್ಲೆ ಸರ್ಕಾರಿ ಪ್ರೌಢಶಾಲೆ ಹಳೆ ವಿದ್ಯಾರ್ಥಿಗಳ ಸೇವಾ ಟ್ರಸ್ಟ್ ನಿಂದ ನೂತನ ಶಾಲಾ ಕಟ್ಟಡದ ನಿರ್ಮಾಣದೊಂದಿಗೆ ಅಭಿವೃದ್ಧಿ ಕಾರ್ಯಕ್ರಮಗಳ ಬಗೆಗಿನ ವಿಜ್ಞಾಪನಾ ಪತ್ರವನ್ನು ಶಾಸಕ ಹರೀಶ್ ಪೂಂಜ ಬಿಡುಗಡೆಗೊಳಿಸಿದರು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಗುರು ಹೆಬ್ಬಾರ್, ಉಪಾಧ್ಯಕ್ಷ ಕೃಷ್ಣಪ್ರಸಾದ್ ಐತೂರು, ಕಾರ್ಯದರ್ಶಿ ಜಗದೀಶ್ ನಿಡ್ಲೆ ಟ್ರಸ್ಟಿಗಳಾದ ಮಧುಕರ ರಾವ್ ಮಚ್ಚಳೆ, ವೀರೇಶ್ವರ ಹೆಬ್ಬಾರ್, ಮನೋಜ್ ಪಟ್ರಮೆ, ಪ್ರವೀಣ್ ಹೆಬ್ಬಾರ್, ಯುವರಾಜ ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಶಾಂತ ಶೆಟ್ಟಿ ಹಾಗೂ ಶರತ್ ತುಳುಪುಳೆ ಉಪಸ್ಥತರಿದ್ದು, ಶಾಲಾ ನಿರ್ಮಾಣದ ಮಾಹಿತಿಯನ್ನು ನೀಡಿ, ಸಂಪೂರ್ಣ ಸಹಕಾರವನ್ನು ನೀಡುವ ಭರವಸೆಯನ್ನು ಶಾಸಕರು ನೀಡಿದರು.