ಕುಕ್ಕಾವು: ಬೆಳ್ತಂಗಡಿ ತಾಲೂಕಿನಾದ್ಯಂತ ಧಾರಾಕಾರವಾಗಿ ಮಳೆಯಾಗುತ್ತಿದೆ. ಈ ನಡುವೆ ಜೂ.15ರಂದು ಬೆಳಗ್ಗೆ 10.15ರ ಸುಮಾರಿಗೆ ಕುಕ್ಕಾವು ಕೊಪ್ಪಂದ ಗುಂಡಿ ಸಮೀಪ ರಸ್ತೆಗೆ ಮರವೊಂದು ಉರುಳಿ ಬಿದ್ದಿದೆ.

ಈ ವೇಳೆ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಕಡಿರುದ್ಯಾವರದ ಎರ್ಮಲ್ ಪಲ್ಕೆ ಕೊಂಡೋಡಿ ನಿವಾಸಿ ಗುಮ್ಮಣ್ಣ ಮತ್ತು ವಿಮಲಾ ದಂಪತಿಗೆ ಗಾಯವಾಗಿದ್ದು, ಕೂಡಲೇ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ