
ಬೆಳ್ತಂಗಡಿ: ಭಕ್ತಿ ಹೆಜ್ಜೆ ಬಳಗ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಹಾಗೂ ಬೆಳ್ತಂಗಡಿ ತಾಲೂಕಿನ ಎಲ್ಲಾ ಭಜನಾ ಮಂಡಳಿಗಳ ಒಗ್ಗೂಡುವಿಕೆಯಲ್ಲಿ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದ ||ಭಜಕೆರೆ ಗೊಬ್ಬು 2025|| ಕಾರ್ಯಕ್ರಮದ ಅವಲೋಕನ ಸಭೆ ಜೂ.13ರಂದು ನಡೆಯಿತು.
ಸೌಮ್ಯ ಮಾಚಾರು ಪ್ರಾರ್ಥಿಸಿದರು. ಸುರಕ್ಷಾ ಕನ್ನಾಜೆ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ವಿ.ಹೆಚ್.ಪಿ ನವೀನ್ ನೆರಿಯ, ವಕೀಲ ಅನೀಲ್ ಕುಮಾರ್ ಬೆಳ್ತಂಗಡಿ, ಹಿರಿಯ ಭಜಕರ ಮಂಜುನಾಥ್ ಶೆಟ್ಟಿ ನೀಡಿಗಲ್, ಛತ್ರಪತಿ ಶಿವಾಜಿ ಭಜನಾ ಮಂಡಳಿ ಉಜಿರೆ ಅಧ್ಯಕ್ಷ ನಾರಾಯಣ, ಭಕ್ತಿ ಹೆಜ್ಜೆ ಬಳಗ ಸಂಚಾಲಕ ಹರೀಶ್ ನೆರಿಯ, ಉಪಸ್ಥಿತರಿದ್ದರು. ಜೊತೆಗೆ ಭಕ್ತಿ ಹೆಜ್ಜೆ ಬಳಗದ ಸಂಘಟಕರು ತಾಲೂಕಿನ ವಿವಿಧ ಭಜನಾ ಮಂಡಳಿಗಳ ಭಜಕರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಮಂಜುನಾಥ ಶೆಟ್ಟಿ ನಿಡಿಗಲ್ ಇವರಿಗೆ ಸನ್ಮಾನಿಸಲಾಯಿತು. ಮತ್ತು ಭಕ್ತಿ ಹೆಜ್ಜೆ ಬಳಗದ ಸಂಘಟಕರಾದ ಜನಾರ್ಧನ ಉಜಿರೆ, ಬೇಬಿ ಉಮೇಶ್ ಗುರಿಪಳ್ಳ, ಗಣೇಶ್ ದಿಡುಪೆ ಮತ್ತು ದಿನೇಶ್ ಕೊಯ್ಯೂರು ಅವರು ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ನವೀನ್ ನೆರಿಯ ಮಾತನಾಡಿ ಭಜನೆ ಜೊತೆ ಇಂತಹ ಕಾರ್ಯಕ್ರಮ ನಡೆದಾಗ ಮಾತ್ರ ನಮ್ಮ ಸಂಸ್ಕೃತಿ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದರು.
ಬೆಳ್ತಂಗಡಿ ಯುವ ವಕೀಲ ಅನೀಲ್ ಕುಮಾರ್ ಮಾತನಾಡಿ ಹಿಂದೂ ಸಮಾಜಕ್ಕೆ ಈ ಒಂದೂ ಕಾರ್ಯಕ್ರಮ ಪ್ರೇರಣದಾಯಕ ಸಂಘಟನೆಯನ್ನು ಇನ್ನಷ್ಟು ಬಲ ಪಡಿಸಬೇಕು ಸಂಘಟನೆಗೆ ನನ್ನ ಸಂಪೂರ್ಣ ಸಹಕಾರವಿದೆ ಎಂಬ ಭರವಸೆ ನೀಡಿದರು.
ಹರೀಶ್ ನೆರಿಯ ಮಾತನಾಡಿ ಭಜನೆ ಎಂದಿಗೂ ವಿಭಜನೆ ಆಗಬಾರದು ಎಂದೂ ಹೇಳಿದರು. ನಂತರ ಅದ್ರಷ್ಟ ಚೀಟಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.