




ಅರಸಿನಮಕ್ಕಿ: ಶಂಕಿತ ಇಲಿ ಜ್ವರಕ್ಕೆ ಪಡ್ಡಾಯಿಬೆಟ್ಟು ದಡ್ದು ನಿವಾಸಿ ಲಕ್ಷ್ಮಣ ಗೌಡ (52ವ) ರವರು ಜೂ. 8ರಂದು ಮಂಗಳೂರಿನಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಪಡ್ಡಾಯಿಬೆಟ್ಟು ದಡ್ಡು ಮನೆಯ ಕೃಷಿಕ ಶಿವಪ್ಪ ಗೌಡರ ಮಗನಾಗಿದ್ಫು ಪತ್ನಿ ಯಶೋಧ, ಮಕ್ಕಳಾದ ಧನುಷ್, ದೀಕ್ಷಾರವರನ್ನು ಅಗಲಿದ್ದಾರೆ. ಮೃತರು ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಕಾರ್ಯಕರ್ತರಾಗಿದ್ದು ಬೂತ್ ಮಟ್ಟದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು ಎಂದು ತಿಳಿದು ಬಂದಿದೆ.


            






