ಬೆಳ್ತಂಗಡಿ: ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ಸಮಾಜ ಪರಿವರ್ತನಾ ಚಿಂತಕರಾದ ಬುದ್ಧ, ಬಸವ, ಪುಲೆ ಹಾಗೂ ಡಾ.ಬಿ. ಆರ್ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಬೆಳ್ತಂಗಡಿ ತಾಲೂಕಿನ 2024-25ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ 500ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ಹತ್ತನೇ ಹಾಗೂ ದ್ವಿತೀಯ ಪಿ.ಯು.ಸಿಯ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ 5ನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಮೇ.25ರಂದು ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿದ ಶಾಸಕ ಹರೀಶ್ ಪೂಂಜಾ ಅವರು” ಯುವಕರ ತಂಡವನ್ನು ಕಟ್ಟಿದ ಸುಕೇಶ್ ಕೆ.ಮಾಲಾಡಿ ಅವರು ಸಮಾಜ ಸುಧಾರಕರ ಜನ್ಮ ದಿನವನ್ನು ಈ ರೀತಿಯಲ್ಲಿ ಆಚರಿಸುವ ಚಿಂತನೆಯನ್ನು ಮಾಡಿದ್ದೇ ಅರ್ಥಪೂರ್ಣ. ಈ ತಂಡಕ್ಕೆ ನನ್ನ ಸಂಪೂರ್ಣ ಸಹಕಾರವಿದೆ. ಇದನ್ನು ಪ್ರತೀ ವರ್ಷ ಮುಂದುವರಿಸುವುದಾದರೆ 100 ಮಕ್ಕಳಿಗೆ ಪುಸ್ತಕವನ್ನು ನಾನು ನೀಡುತ್ತೇನೆ ಎಂದು ಭರವಸೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂರವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ, ಸತ್ಯ ಶೋಧಕ ಸಮಾಜ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಅಂದು ಜ್ಯೋತಿ ಬಾ ಪುಲೆ ಹಾಗೂ ಸಾವಿತ್ತಿ ಬಾಯಿ ಪುಲೆರವರು ನಡೆಸಿದ ಹೋರಾಟದ ಮಜಲುಗಳನ್ನು ನೆನಪಿಸುತ್ತಾ, ವಿದ್ಯಾರ್ಥಿಗಳಿಗೆ ಹೆಚ್ಚು ಪತ್ರಿಕೆಗಳನ್ನು ಓದುವಂತೆ ಕರೆ ನೀಡಿದರು.
ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಮಾತಾಡಿ ಉತ್ತಮ ನಾಯಕತ್ವ ಹೊಂದಿರುವ ಸುಕೇಶ್ ರವರ ಗರಡಿಯಲ್ಲಿ ಈ ವಿದ್ಯಾರ್ಥಿಗಳು ಇಲ್ಲಿಗೇ ಸೀಮಿತವಾಗದೇ ಮುಂದಿನ ಭವಿಷ್ಯದ ದಿನಗಳಲ್ಲಿ ಉತ್ತಮ ಸಾಧನೆ ಮಾಡುವಂತಾಗಬೇಕು ಹಾಗಾಗಿ ಅವರೊಡನೆ ನಿರಂತರ ಸಂಪರ್ಕದಲ್ಲಿ ಇರುವಂತೆ ಕಿವಿಮಾತು ಹೇಳಿದರು.

ಅದ್ಯಕ್ಷತೆ ವಹಿಸಿ ಮಾತಾಡಿದ ಸತ್ಯ ಶೋಧಕ ವೇದಿಕೆ ಅಧ್ಯಕ್ಷ ಸುಕೇಶ್ ಕೆ. ಮಾಲಾಡಿ ಭವಿಷ್ಯದಲ್ಲಿ ಬೆಳ್ತಂಗಡಿ ತಾಲೂಕಿನಿಂದ ಯಾರಾದರೂ ಜಿಲ್ಲಾಧಿಕಾರಿ ಅಥವಾ ತಹಶಿಲ್ದಾರ್ ಆಗಬೇಕು, ಅದು ನಮ್ಮ ಸತ್ಯ ಶೋಧಕದ ವಿದ್ಯಾರ್ಥಿಯಾಗಿರಬೇಕು. ಈ ರೀತಿ ಕಲಿಯುವ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ಎನ್ನುತ್ತಾ ಮುಂದಿನ ದಿನಗಳಲ್ಲಿ ಇಂತಹ ಅನೇಕ ಕಾರ್ಯಕ್ರಮಗಳನ್ನು ಮಾಡುವ ಯೋಜನೆ ಇದೆ ಎಲ್ಲರ ಸಹಕಾರವಿರಲಿ ಎಂದು ವಿನಂತಿಸಿ, ಶೀಘ್ರದಲ್ಲೇ ಒಂದು ಕಛೇರಿಯನ್ನು ಕೂಡ ತೆರೆಯಲಾಗುವುದು ಎಂದು ತಿಳಿಸಿದರು.
ವೇದಿಕೆಯಲ್ಲಿ ಬಿ.ಜೆ.ಪಿ. ಮಂಡಲದ ಎಸ್.ಸಿ. ಮೊರ್ಚಾ ಅಧ್ಯಕ್ಷ ಈಶ್ವರ ಬೈರ, ಭೂ ನ್ಯಾಯ ಮಂಡಳಿ ಸದಸ್ಯ ಬಾಬು ಎರ್ಮೆತ್ತೋಡಿ, ರೈಡಿಂಗ್ ಜೋಡಿ ಯೂ ಟ್ಯೂಬ್ ಚಾನಲ್ ನ ಮುಖ್ಯಸ್ಥ ಶ್ಯಾಮ್ ಪ್ರಸಾದ್ ಕಾಮತ್, ಎಸ್.ಡಿ.ಸಿ.ಸಿ ಬ್ಯಾಂಕ್ ನೌಕರ ರಾಮು ಆರ್. ಉಪಸ್ಥಿತರಿದ್ದು ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ದಿನೇಶ್ ಬೆರ್ಕಳ, ರಾಜೇಶ್ ಕುಲಾಲ್ ಪಣಕಜೆ, ಸುರೇಶ್ ಮಾಲಾಡಿ, ಕಿರಣ್ ಗಾಂಧಿನಗರ, ವಸಂತ ಬೆರ್ಕಳ ಸೇರಿದಂತೆ ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ ತಂಡದ ಎಲ್ಲಾ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಮಾರು 310 ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ಹಾಗೂ 40 ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. ಸುರಕ್ಷಿತ ಹಾಗೂ ಸುಶ್ಮೀತಾ ನಾರಾವಿ ನಾಡಗೀತೆ ಹಾಡಿದರು. ಪ್ರಿಯಾ ಕಳೆಂಜ ಸ್ವಾಗತಿಸಿದರು. ಲಲಿತ ಕಳೆಂಜ ನಿರೂಪಿಸಿದರು. ಸುಶ್ಮೀತಾ ಮಾಲಾಡಿ ಧನ್ಯವಾದವಿತ್ತರು.