ಬೆಳ್ತಂಗಡಿ: ವಸ್ತ್ರ ವ್ಯಾಪಾರ ಕ್ಷೇತ್ರದಲ್ಲಿ ಸುದೀರ್ಘ ವರ್ಷಗಳ ಅನುಭವಹೊಂದಿರುವ, ಈಗಾಗಲೇ ಹಲವು ಶಾಖೆಗಳನ್ನು ಹೊಂದಿ ವಿಸ್ತಾರವಾಗಿ ಬೆಳೆದಿರುವ ಅತ್ಯಂತ ಜನಪ್ರಿಯ ಮಳಿಗೆ ಧೂಮ್ ಧಮಾಕಾ ಡಿ.ಡಿ ಗ್ರೂಪ್ಸ್ ಇದರ ವತಿಯಿಂದಡಿ.ಡಿ ಮೆನ್ಸ್ & ವಿಮೆನ್ಸ್ ಸೆಂಟರ್ ಉಜಿರೆ ಮಲ್ಟಿ ಶೋ ರೂಮ್ ಉಜಿರೆ ಎಸ್.ಡಿ. ಎಂ ಕಾಲೇಜು ರಸ್ತೆಯ ಬೆಳಾಲು ಕ್ರಾಸ್ ಬಳಿಯ ಸಮೃದ್ದಿ ಕಟ್ಟಡದಲ್ಲಿ ಮೇ.31ರಂದು ಅದ್ದೂರಿಯಾಗಿ ಉದ್ಘಾಟನೆಗೊಳ್ಳಲಿದೆ.
ಅಬ್ದುಲ್ ರಝಾಕ್ ಕನ್ನಡಿಕಟ್ಟೆ ಮತ್ತು ಅವರ ನಾಲ್ವರು ಮಕ್ಕಳಾದ ಇರ್ಫಾನ್, ಇಮ್ರಾನ್, ಸಿನಾನ್ ಮತ್ತು ಶಿಮ್ರಾನ್ ಇವರ ಮಾಲಕತ್ವದ ಈ ಮಳಿಗೆ ಡಿ.ಡಿ ಗ್ರೂಪ್ಸ್‌ನ ಯಶಸ್ವಿ 15ನೇ ಮಳಿಗೆ ಬೆಳೆಯುತ್ತಿರುವ ಉಜಿರೆ ಶೈಕ್ಷಣಿಕ ನಗರಿಗೆ ಇದೊಂದು ಅಭೂತಪೂರ್ವ ಕೊಡುಗೆಯಾಗಿ ಮೇ.31ರಂದು ಸಮರ್ಪಿತವಾಗಲಿದೆ. ಒಂದೇ ಸೂರಿನಡಿ ಮಹಿಳೆಯರ, ಪುರುಷರ, ಗಂಡು ಮಕ್ಕಳ, ಹೆಣ್ಣು ಮಕ್ಕಳ ಪ್ರತ್ಯೇಕ ಬ್ರಾಂಡೆಡ್ ಮತ್ತು ಸಾಮಾನ್ಯ ಉಡುಪುಗಳು, ಒನ್ ಗ್ರಾಂ ಗೋಲ್ಡ್ ಮತ್ತು ಆಂಟಿಕ್ ಮಾದರಿಯ ಆಭರಣಗಳು, ಮಹಿಳೆಯರ ಸ್ಡೈಲಿಶ್ ಬ್ಯಾಗ್‌ಗಳು, ಚಪ್ಪಲ್ ಮತ್ತು ಶೂಸ್ ಗಳು ಒಂದೇ ಕಡೆ ಆಯ್ಕೆ ಮಾಡುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ.
ಉಪ್ಪಿನಂಗಡಿಯ ಪ್ರಥಮ ಮಳಿಗೆಯಿಂದ ತನ್ನ ಚೈತ್ರಯಾತ್ರೆ ಆರಂಭಿಸಿರುವ ಡಿ.ಡಿ (ಧೂಮ್ ಧಮಾಕಾ) ಉಪ್ಪಿನಂಗಡಿ, ಬೆಳ್ತಂಗಡಿ, ಮಡಂತ್ಯಾರು, ಗುರುವಾಯನಕೆರೆ, ಮೂಡಿಗೆರೆ, ಚಿಕ್ಕಮಗಳೂರು ಇಲ್ಲೆಲ್ಲಾ ಶಾಖೆಗಳನ್ನು ಹೊಂದಿದ್ದು ಗ್ರಾಹಕ ಸ್ನೇಹಿಯಾಗಿ, ವಿಶ್ವಾಸಾರ್ಹತೆ ಮೂಲಕ ಬೆಳೆದು ನಿಂತಿದೆ.
ಪ್ರಖ್ಯಾತ ಕಂಪೆನಿಗಳ ವಸ್ತ್ರಗಳ ಅಪೂರ್ವ ಸಂಗ್ರಹ, ಜನಸಾಮಾನ್ಯರ ಆಯ್ಕೆಯ ವಸ್ರ್ತಗಳ ಯತೇಚ್ಚ ಲಭ್ಯತೆ, ವಿಶಾಲವಾದ ಹವಾನಿಯಂತ್ರಿತ ವ್ಯವಸ್ಥೆ, ಗ್ರಾಹಕರಿಗೆ ವಾಶ್ ರೂಂ ಮತ್ತು ಲೇಡಿಸ್ ಕಾರ್ನರ್ ಎಲ್ಲಾ ಸೌಕರ್ಯಗಳನ್ನೂ ಒಳಗೊಂಡು ಮಾದರಿಯಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಸಯ್ಯಿದರುಗಳು, ಸಾದಾತುಗಳು, ಉಜಿರೆಯ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದ ಮುಂದಾಳುಗಳು, ವಿಶೇಷವಾಗಿ ಉದ್ಯಮ ಕ್ಷೇತ್ರದಲ್ಲೇ ಪ್ರಸಿದ್ಧರಾಗಿರುವ ಅಗ್ರಗಣ್ಯ ಅತಿಥಿಗಳು ಹಾಗೂ ಸರ್ವ ಧರ್ಮೀಯರ ಸಮಕ್ಷಮ ಉದ್ಘಾಟನೆಗೊಳ್ಳಲಿದೆ.
ಇದೇ ವೇಳೆ ಸಂಸ್ಥೆಯ ಸ್ಥಾಪಕ ಪ್ರೇರಕರಾಗಿರುವ ಖ್ಯಾತ ಉದ್ಯಮಿ ಸಚಿನ್ ಸುಂದರ್ ಉಪ್ಪಿನಂಗಡಿ, ಮಹಿಳಾ ಉದ್ಯಮಿಗಳ ಪೈಕಿ ಉನ್ನತ ಸ್ಥಾನದಲ್ಲಿರುವ ಅರ್ಚನಾ ರಾಜೇಶ್ ಪೈ ಉಜಿರೆ, ಶೈಕ್ಷಣಿಕ ಪ್ರಗತಿಯಲ್ಲಿ ಸಹಾಯಕ ಆಯುಕ್ತರಾಗಿ (ಎ.ಸಿ.) ಸೇವೆಯಲ್ಲಿರುವ ಉಜಿರೆಯ ಡಾ. ಔದ್ರಾಮ ಅಬ್ದುಲ್ ರಹಿಮಾನ್ ಅವರಿಗೆ ನಾಡಿನ ಗೌರವದ ನೆಲೆಯಲ್ಲಿ ಸನ್ಮಾನ ನಡೆಯಲಿದೆ ಎಂದು ಮಾಲಕ ಅಬ್ದುಲ್ ರಝಾಕ್ ಮತ್ತು ಮಕ್ಕಳು ತಿಳಿಸಿದ್ದಾರೆ. ಹಾಗೂ ಸರ್ವರನ್ನೂ ಆಹ್ವಾನಿಸಿದ್ದಾರೆ.