ದೇಶ ರಕ್ಷಕರಿಗೆ ಬೆನಕದಲ್ಲಿ ಉಚಿತ ಚಿಕಿತ್ಸೆ

0

ಉಜಿರೆ: ದೇಶಕ್ಕೆ ದೇಶವೇ ನಮ್ಮ ಸೈನಿಕರಿಗೆ ಜೈಕಾರ ಹಾಕುತ್ತಿದೆ. ಪಾಕಿಸ್ತಾನ ಪ್ರೇರಿತ ಉಗ್ರರ ದಾಳಿಗೆ ಭಾರತ ತೀರಿಸಿದ ಪ್ರತೀಕಾರದ ರೀತಿಗೆ, ಸೈನಿಕರು ವೀರಾಗ್ರಣಿಗಳಂತೆ ಹೋರಾಡಿದ ಸಾಮರ್ಥ್ಯಕ್ಕೆ, ಸೇನಾನಿಗಳ ನಿರಂತರ ಹೋರಾಟಕ್ಕೆ, ಪಾಕಿಸ್ತಾನದ ನೆಲೆಗಳನ್ನು ಹೊಡೆದುರುಳಿಸಿದ್ದಕ್ಕೆಲ್ಲಾ ಜೈಕಾರ ಮೊಳಗುತ್ತಿದೆ.
ಈ ಎಲ್ಲಾ ಖುಷಿಯ ನಡುವೆ ಬೆಳ್ತಂಗಡಿ ತಾಲೂಕಿನ ಉಜಿರೆಯ ಪ್ರಸಿದ್ಧ ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಮತ್ತೊಂದು ಹೆಗ್ಗಳಿಕೆ ಸೇರಿಕೊಂಡಿದೆ. ಆಸ್ಪತ್ರೆಯಲ್ಲಿ ಮಾಜಿ ಸೈನಿಕರಿಗೆ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆ ಆರಂಭಗೊಂಡಿದ್ದು, ಕೇಂದ್ರ ಸರ್ಕಾರವೂ ಇದಕ್ಕೆ ಅನುಮೋದನೆ ನೀಡಿದೆ.

ಮೇ.೨೨ರಂದು ಚಾಲನೆ ಮಾಜಿ ಸೈನಿಕರ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ದೇಶದ ವಿವಿಧ ಆಸ್ಪತ್ರೆಯಲ್ಲಿ (ಉಇಏಖ) ಮಾಜಿ ಸೈನಿಕರ ಆರೋಗ್ಯ ಸೇವೆಯನ್ನು ಆರಂಭಿಸಿದೆ. ಭಾರತ ಸರ್ಕಾರದ ಆಶ್ರಯದಲ್ಲಿ ಸ್ಥಾಪಿಸಲಾದ ಮಾಜಿ ಸೈನಿಕರ ಆರೋಗ್ಯ ಯೋಜನೆ ಏಪ್ರಿಲ್ ೧, ೨೦೦೩ರಂದು ಪ್ರಾರಂಭವಾದ ಸಮಗ್ರ ಆರೋಗ್ಯ ಕಾರ್ಯಕ್ರಮವಾಗಿದೆ. ದೇಶದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಮಾತ್ರ ಈ ಸೌಲಭ್ಯ ಲಭ್ಯವಿದ್ದು, ಇದೀಗ ಬೆನಕ ಆಸ್ಪತ್ರೆಯೂ ಕೂಡ ಈ ಸೇವೆ ನೀಡುವ ಅರ್ಹತೆ ಗಿಟ್ಟಿಸಿಕೊಂಡಿದೆ. ಈ ವಿಶೇಷ ಯೋಜನೆಯನ್ನು ಮೇ ೨೨ರಂದು ಉದ್ಘಾಟನೆಗೊಳಿಸಲಾಗುತ್ತದೆ. ನಿವೃತ್ತ ಕರ್ನಲ್ ನಿತಿನ್ ಭಿಡೆಯವರನ್ನು ಈ ಸಂದರ್ಭದಲ್ಲಿ ಬೆನಕ ಆಡಳಿತ ಮಂಡಳಿ ಸನ್ಮಾನಿಸಲಿದೆ. ಈ ವೇಳೆ, ಬೆಳ್ತಂಗಡಿ ತಾಲೂಕು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಮೊಹಮ್ಮದ್ ರಫಿ, ಕಾರ್ಯದರ್ಶಿ ಉಮೇಶ್ ಬಂಗೇರ ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ.

ಮಾಜಿ ಸೈನಿಕರ ಸೇವೆಗೆ ಆಯ್ಕೆ, ಕ್ರ್ರಮ ಹೇಗೆ?: ದೇಶದ ರಕ್ಷಣೆಗೆ ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಹೋರಾಡಿದ ವೀರಾಗ್ರಣಿ ಮಾಜಿ ಸೈನಿಕರ ವೈದ್ಯಕೀಯ ಸೇವೆಗೆ ಬೆನಕ ಆಸ್ಪತ್ರೆ ಆಯ್ಕೆಯಾಗಿದೆ. ನಿವೃತ್ತ ಸೈನಿಕರ ಮನವಿ ಮೇರೆಗೆ ಬೆನಕ ಆಸ್ಪತ್ರೆ ಅರ್ಜಿ ಸಲ್ಲಿಸಿತ್ತು. ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುತ್ತಿರುವ ಬೆನಕ ಆಸ್ಪತ್ರೆಯ ಸೌಲಭ್ಯ, ಇಲ್ಲಿನ ವಿವಿಧ ವಿಭಾಗಗಳಲ್ಲಿ ನೀಡಲಾಗುವ ಚಿಕಿತ್ಸಾ ವಿಧಾನ, ಐಸಿಯು, ಸಿಟಿ ಸ್ಕ್ಯಾನ್, ಎಕ್ಸ್ ರೇ, ಲ್ಯಾಬ್ ನ ಗುಣಮಟ್ಟ, ಸೂಪರ್ ಸ್ಪೆ?ಲಿಟಿ ಸೌಲಭ್ಯ ಎಲ್ಲದರ ಪರಿಶೀಲನೆಗಾಗಿ ಸೇನಾ ಮುಖ್ಯಸ್ಥರ ದಂಡೇ ಆಗಮಿಸಿ ಪರಿಶೀಲನೆ ಮಾಡಿದೆ. ಐದಾರು ಬಾರಿ ಬಂದು ವಿವಿಧ ಸೇನಾ ಮುಖ್ಯಸ್ಥರು ಇಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ. ಸೌಲಭ್ಯ, ಸೇವಾ ಮನೋಭಾವದ ಜೊತೆಗೆ ಸ್ವಚ್ಛತೆಯನ್ನು ಗಮನಿಸುತ್ತಾರೆ. ಶೌಚಾಲಯದ ವ್ಯವಸ್ಥೆ, ಸ್ವಚ್ಛತೆಯನ್ನು ಗಮನಿಸಿ, ಆಸ್ಪತ್ರೆ ನಿವೃತ್ತ ಸೇನಾನಿಗಳು ಮತ್ತು ಅವರ ಅವಲಂಬಿತರಿಗೆ ಚಿಕಿತ್ಸೆ ನೀಡಲು ಅರ್ಹವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದ ನಂತರವೇ ಇಸಿಎಚ್‌ಎಸ್ ಯೋಜನೆಗೆ ಆಸ್ಪತ್ರೆಯಲ್ಲಿ ಅವಕಾಶ ನೀಡಲಾಗುತ್ತದೆ. ೧.೬ ವಷಗಳಿಂದ ನಿರಂತರವಾಗಿ ಆಗಾಗ ವಿವಿಧ ಪರಿಶೀಲನೆಗಳು ನಡೆದು ಈಗ ಬೆನಕ ಆ ಅರ್ಹತೆ ಪಡೆದುಕೊಂಡಿದೆ.

ಹೊಸ ಮೈಲಿಗಲ್ಲು: ೧೯೯೦ರಲ್ಲಿ ಆರಂಭವಾದ ಬೆನಕ ಕ್ಲಿನಿಕ್, ೨೦೦೦ನೇ ಇಸವಿಯಲ್ಲಿ ೭ ಹಾಸಿಗೆಯುಳ್ಳ ಆಸ್ಪತ್ರೆಯಾಗಿತ್ತು. ಇಬ್ಬರು ವೈದ್ಯರು, ಇಬ್ಬರು ನರ್ಸ್‌ಗಳಿದ್ದರು. ೨೦೦೧ರಲ್ಲಿ ಎಕ್ಸ್‌ರೇ ಯುನಿಟ್, ೨೦೦೨ರಲ್ಲಿ ಮೊದಲ ಮಹಡಿ ಸೇರಿಸಿ ೨೦ ಹಾಸಿಗೆಯುಳ್ಳ ಆಸ್ಪತ್ರೆಯಾಯಿತು. ೨೦೦೩ರಲ್ಲಿ ಆರ್ಥೋಪೆಡಿಕ್ ಕನ್ಸಲ್ಟೆನ್ಸಿ, ೨೦೦೪ರಲ್ಲಿ ಎರಡನೇ ಮಹಡಿ ಸೇರ್ಪಡೆಯಾಗಿ ೩೦ ಹಾಸಿಗೆಯ ವ್ಯವಸ್ಥೆ, ೨೦೦೫ರಲ್ಲಿ ಅಲ್ಟ್ರಾ ಸೌಂಡ್ ಸೇವೆ, ಪ್ರಖ್ಯಾತ ಹೃದಯ ತಜ್ಞ ಪದ್ಮನಾಭ ಕಾಮತ್‌ರವರಿಂದ ವಾರಕ್ಕೊಂದು ಬಾರಿ ಭೇಟಿ, ೨೦೦೬ರಲ್ಲಿ ಸಣ್ಣ ಓಟಿ, ೨೦೦೭ರಲ್ಲಿ ಸುಸಜ್ಜಿತ ಲ್ಯಾಬ್ ಸೇವೆ, ೨೦೦೮ರಲ್ಲಿ ನ್ಯೂರೋಲಜಿ ಒಪಿಡಿ ಸರ್ವಿಸ್, ೨೦೦೯ರಲ್ಲಿ ಸಿ ಆರ್ಮ್ ಮೆಷಿನ್‌ಗಳ ಬಳಕೆ, ೨೦೧೦ರಲ್ಲಿ ೪೦ ಹಾಸಿಗೆಯ ಆಸ್ಪತ್ರೆಯಾಗಿ ಬದಲಾಯಿತು. ನಂತರ ಪಂಚಕರ್ಮ ಸೌಲಭ್ಯ, ಆಂಬ್ಯುಲೆನ್ಸ್, ಫಿಜಿಯೋಥೆರಪಿ ಯುನಿಟ್, ೩ ಮೇಜರ್ ಓಟಿ, ೨೦೧೬ರಲ್ಲಿ ಮಹಿಳಾ ವಾರ್ಡ್ ಸೇರಿದಂತೆ ೫೫ ಹಾಸಿಗೆಯ ಆಸ್ಪತ್ರೆಯಾಯಿತು. ಇದೆಲ್ಲವನ್ನು ಪರಿಗಣಿಸಿ ೨೦೧೮ರಲ್ಲಿ ಎನ್‌ಎಬಿಎಚ್ ಸೇಫ್ ಐ ಪ್ರಶಸ್ತಿ, ೨೦೧೯ರಲ್ಲಿ ದಿ ಕಾಯಕಲ್ಪ ಪ್ರಶಸ್ತಿ, ೨೦೨೦ರಲ್ಲಿ ಎನ್‌ಎಬಿಎಚ್‌ನಿಂದ ಗುರುತಿಸುವಿಕೆ, ೨೦೨೧ರಲ್ಲಿ ಬೆನಕ ಹೋಮ್ ಹೆಲ್ತ್ ಕೇರ್ ಆರಂಭ, ೨೦೨೨ರಲ್ಲಿ ೧೦೦ ಹಾಸಿಗೆಯುಳ್ಳ ಆಸ್ಪತ್ರೆಯಲ್ಲಿ ಪ್ರೀಮಿಯರ್ ಸೂಟ್ ರೂಮ್, ಲ್ಯಾಪ್ರೋಸ್ಕೋಪಿಕ್ ಸರ್ಜರಿ ವ್ಯವಸ್ಥೆ, ೨೦೨೩ರಲ್ಲಿ ಡಿಜಿಟಲ್ ಎಕ್ಸ್ ರೇ, ೨೦೨೪ರಲ್ಲಿ ಸೀಮನ್ಸ್ ಸಿಟಿ ಸ್ಕ್ಯಾನ್ ಮತ್ತು ಸಂಪೂರ್ಣ ಸೌಲಭ್ಯಗಳುಳ್ಳ ತುರ್ತು ನಿಗಾ ಘಟಕ ಸ್ಥಾಪಿಸಲಾಯಿತು. ೨೦೨೫ರಲ್ಲಿ ೧೩೦ ಹಾಸಿಗೆಯುಳ್ಳ ಆಸ್ಪತ್ರೆಯ ಜೊತೆ ಎಮರ್ಜೆನ್ಸಿ ಯುನಿಟ್, ಡೇ ಕೇರ್ ಯುನಿಟ್, ಪೀಡಿಯಾಟ್ರಿಕ್ ವಾರ್ಡ್ ಸಹಿತ ಹಲವು ಸೌಲಭ್ಯಗಳ ಜೊತೆಗೆ ೨೫ನೇ ವಷದ ಸಂಭ್ರಮಾಚರಣೆ ನಡೆಯುತ್ತಿದೆ. ಹೀಗಿರುವಾಗಲೇ ಈಗ ಮತ್ತೊಂದು ಮಹಾಗರಿ ಸೇರಿಕೊಂಡಿದೆ.

ಏನಿದು ಇಸಿಎಚ್‌ಎಸ್? ಚಿಕಿತ್ಸೆ ಹೇಗೆ?: ಭಾರತ ಸರ್ಕಾರದ ಆಶ್ರಯದಲ್ಲಿ ಸ್ಥಾಪಿಸಲಾದ ಮಾಜಿ ಸೈನಿಕರ ಆರೋಗ್ಯ ಯೋಜನೆ ಏಪ್ರಿಲ್ ೧, ೨೦೨೩ರಂದು ಪ್ರಾರಂಭವಾದ ಸಮಗ್ರ ಆರೋಗ್ಯ ಕಾರ್ಯಕ್ರಮವಾಗಿದೆ. ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ ಉಚಿತ ಸಮಗ್ರ ವೈದ್ಯಕೀಯ ಸೇವೆಗಳನ್ನು ತಲುಪಿಸುವ ಪ್ರಮುಖ ಉzಶದಿಂದ ವಿನ್ಯಾಸಗೊಳಿಸಲಾದ ಯೋಜನೆಯಾಗಿದೆ.
ಮಂಗಳೂರಿನಲ್ಲಿದೆ ಇಸಿಎಚ್‌ಎಸ್ ಪಾಲಿಕ್ಲಿನಿಕ್ಸ್ ಮತ್ತು ರೆಫರಲ್ ಸಿಸ್ಟಮ್ಇಸಿಹೆಚ್‌ಎಸ್ ಫಲಾನುಭವಿಗಳಾದ ನಂತರ ಸದಸ್ಯರು ತಮ್ಮ ಸದಸ್ಯತ್ವ ಕಾರ್ಡ್‌ನೊಂದಿಗೆ ತಮ್ಮ ಸ್ಥಳೀಯ ಪಾಲಿಕ್ಲಿನಿಕ್‌ಗೆ ಭೇಟಿ ನೀಡಬಹುದು. ರೋಗಿಯ ವಿಶೇಷ ಆರೈಕೆಗಾಗಿ ವಿವಿಧ ಆಸ್ಪತ್ರೆಗಳಿಗೆ ಇಲ್ಲಿಂದ ರೆಫರ್ ಮಾಡಲಾಗುತ್ತದೆ. ಇಲ್ಲಿ, ಮಾಜಿ ಸೇನಾಧಿಕಾರಿಯೊಬ್ಬರು ಇದರ ನಿರ್ವಹಣೆಯಲ್ಲಿ ತೊಡಗಿಕೊಂಡಿರುತ್ತಾರೆ.

ಬೆನಕ ಸನ್ನದ್ಧ: ಸರ್ವೇ ಸಂತು ನಿರಾಮಯ ಎಂಬ ಘೋಷವಾಕ್ಯದಡಿ ವೈದ್ಯಕೀಯ ಸೇವೆ ನೀಡುತ್ತಿರುವ ಬೆನಕ ಆಸ್ಪತ್ರೆ ಮಾಜಿ ಸೈನಿಕರ ಸೇವೆಗೆ ಸರ್ವಸನ್ನದ್ಧವಾಗಿದೆ. ಈ ಮೂಲಕ ದೇಶ ಕಾಯ್ದ ಹೆಮ್ಮೆಯ ವೀರಾಗ್ರಣಿಗಳಿಗೆ ಆರೋಗ್ಯ ಸೇವೆ ಮಾಡುವ ಅಪೂರ್ವ ಭಾಗ್ಯವೊಂದು ದೊರೆತಿದೆ.

ಪರಿಗಣಿಸಿದ್ದಕ್ಕೆ ಹೆಮ್ಮೆ
ನಮ್ಮ ದೇಶಕ್ಕಾಗಿ ಸೇವೆ ಸಲ್ಲಿಸಿದ ನಿವೃತ್ತ ಸೈನಿಕರಿಗೆ ಉಚಿತ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರ ಬೆಳ್ತಂಗಡಿ ತಾಲೂಕಿನಲ್ಲಿರುವ ಬೆನಕ ಆಸ್ಪತ್ರೆಯನ್ನು ಅನುಮೋದಿಸಿರುವುದು ಹೆಮ್ಮೆಯ ವಿಷಯ. ಆಸ್ಪತ್ರೆಯನ್ನು ಗುರುತಿಸುವುದಕ್ಕಾಗಿ ಸೇನೆಯ ಉನ್ನತ ಅಧಿಕಾರಿಗಳು ಐದಾರು ಬಾರಿ ಭೇಟಿ ನೀಡಿ ಪರಿಶೀಲಿಸಿದ್ದರು. ಈ ಅಸ್ಪತ್ರೆಯಲ್ಲಿರುವ ಸೌಲಭ್ಯ, ಚಿಕಿತ್ಸಾ ವಿಧಾನ, ಚಿಕಿತ್ಸೆ ನೀಡಲು ಬೇಕಾದ ಉನ್ನತ ಗುಣಮಟ್ಟ, ವಿವಿಧ ವಿಭಾಗಗಳ ಪರಿಶೀಲನೆಯ ಜೊತೆಗೆ ಆಸ್ಪತ್ರೆಯ ಸ್ವಚ್ಛತೆ, ಬಾತ್ ರೂಮ್, ಟಾಯ್ಲೆಟ್ ಕೂಡ ಪರಿಶೀಲನೆ ಮಾಡಿದ್ದಾರೆ. ಆರು ತಿಂಗಳಿನಿಂದ ಈ ಪ್ರಕ್ರಿಯೆ ನಡೆದಿದೆ. ಬೆನಕ ಆಸ್ಪತ್ರೆಗೆ ಬಂದ ಮಾಜಿ ಸೈನಿಕರೇ ನಮ್ಮಲ್ಲಿ ನಿವೃತ್ತ ಸೈನಿಕರ ನಗದು ರಹಿತ ಚಿಕಿತ್ಸಾ ಯೋಜನೆ ಆಗಬೇಕೆಂದು ಒತ್ತಾಯಿಸಿ, ಅರ್ಜಿ ನೀಡಲು ಪ್ರೇರೇಪಿಸಿದ್ದಾರೆ. ಸಿಟಿ ಸ್ಕ್ಯಾನ್, ಎಕ್ಸ್ ರೇ, ಲ್ಯಾಬ್‌ನ ಗುಣಮಟ್ಟ, ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳನ್ನು ಗಮನಿಸಿದ್ದಾರೆ, ಐಸಿಯು, ಆರ್ಥೋಪೆಡಿಕ್ ಸೆಕ್ಷನ್ ಇವೆಲ್ಲ ಒಂದೇ ಸೂರಿನಡಿ ಇರುವುದರಿಂದ ನಮ್ಮನ್ನು ಪರಿಗಣಿಸಿದ್ದಾರೆ. ನಮ್ಮ ಸೈನಿಕರಿಗೆ ಸೇವೆ ಸಲ್ಲಿಸಲು ನಾವು ಸನ್ನದ್ಧವಾಗಿzವೆ.
ಡಾ. ಗೋಪಾಲಕೃಷ ಭಟ್‌ಆಡಳಿತ ನಿರ್ದೇಶಕರು, ಬೆನಕ ಹೆಲ್ತ್ ಸೆಂಟರ್, ಉಜಿರೆ

ಬೆನಕದಲ್ಲಿ ಈ ಸೇವೆ ವಿಶೇಷ-ನಿವೃತ್ತ ಸೈನಿಕರಿಗೆ ದೊಡ್ಡ ನೆರವು: ಸೈನಿಕರು ನಿವೃತ್ತಿಯಾಗುವಾಗ ಹಣ ಕಟ್ಟುತ್ತಾರೆ,ಆದ್ದರಿಂದ ಅವರಿಗೆ ನಗದು ರಹಿತ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ. ಇದು ನಗದು ರಹಿತ ಮತ್ತು ಯಾವುದೇ ನಿಗದಿತ ವಯಸ್ಸು,ಅಥವಾ ಇಂತಿಷ್ಟೇ ಮೊತ್ತ ಅಂತ ಯಾವುದೇ ನಿಯಮಗಳು ಇದರಲ್ಲಿ ಇಲ್ಲ. ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಈಸಿಹೆಚ್ ಎಸ್ ಪಾಲಿ ಕ್ಲಿನಿಕ್ ಇದೆ. ಪಾಲಿ ಕ್ಲಿನಿಕ್ ಅಂದರೆ ಅದೊಂದು ನೋಡಲ್ ಏಜೆನ್ಸಿಯಂತೆ ಕಾರ್ಯನಿರ್ವಹಿಸುತ್ತದೆ. ನಿವೃತ್ತ ಸೈನಿಕರು ಮೊದಲು ಪಾಲಿ ಕ್ಲಿನಿಕ್ ಗೆ ಬಂದು ಇಲ್ಲಿರುವ ವೈದ್ಯರಲ್ಲಿ ಆರೋಗ್ಯ ಸಮಸ್ಯೆ ಬಗ್ಗೆ ತಿಳಿಸುತ್ತಾರೆ. ಇಲ್ಲಿಂದ ರೆಫರಲ್ ಅರ್ಜಿಯೊಂದಿಗೆ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಕಳುಹಿಸಿಕೊಡುತ್ತಾರೆ. ಅಲ್ಲಿ ಅವರಿಗೆ ಬೇಕಾದ ಚಿಕಿತ್ಸೆ ಪಡೆಯುತ್ತಾರೆ.ಕಣ್ಣೂರಿನಿಂದ ಕಾರವಾರದವರೆಗೆ ಮೆಡಿಕಲ್ ಟ್ರೀಟ್ ಮೆಂಟ್ ಗೆ ಮಂಗಳೂರು ಕೇಂದ್ರವಾಗಿದೆ. ತುರ್ತು ಸಂದರ್ಭಗಳಾದರೆ ಮೊದಲು ಚಿಕಿತ್ಸೆ ಪಡೆಯಬಹುದು.ಅದಕ್ಕೆ ಬೇಕಾದ ವ್ಯವಸ್ಥೆಗಳಿವೆ.ಗ್ರಾಮೀಣ ಪ್ರದೇಶದಲ್ಲಿ ಉಜಿರೆಯ ಬೆನಕ ಆಸ್ಪತ್ರೆಗೆ ಈ ಯೋಜನೆ ಬಂದಿರುವುದರಿಂದ ಬಹುದೊಡ್ಡ ನೆರವು ಸಿಗುತ್ತದೆ. ಚಿಕ್ಕಮಗಳೂರಿನಿಂದಲೂ ಕೂಡ ಬೆನಕ ಆಸ್ಪತ್ರೆಯ ಸೇವೆ ಲಭಿಸಲಿದೆ.ಇದು ಕೇವಲ ನಿವೃತ್ತ ಸೈನಿಕರಿಗೆ ಮಾತ್ರವಲ್ಲ,ಅವರ ಅವಲಂಬಿತರಿಗೂ ಆರೋಗ್ಯ ಸೇವೆ ಲಭ್ಯವಿದೆ.
ನಿತಿನ್ ಭಿಡೆ, ನಿವೃತ್ತ ಕರ್ನಲ್

LEAVE A REPLY

Please enter your comment!
Please enter your name here