ಬೆಳ್ತಂಗಡಿ: ಬಹಳ ದಿನಗಳಿಂದ ಕುತೂಹಲ ಕೆರಳಿಸಿದ್ದ ಬೆಳ್ತಂಗಡಿ ಮುಳಿಯ ಆಭರಣ ಮಳಿಗೆ ಮೇ. 17ರಂದು ವಿದ್ಯುಕ್ತವಾಗಿ ಚಾಲನೆಗೊಂಡಿತು. ಮುಳಿಯ ಸಂಸ್ಥೆಗೆ ರಾಯಭಾರಿಯಾಗಿರುವ ರಮೇಶ್ ಅರವಿಂದ್ ಮುಳಿಯದ ಹೊಸ ಶೋ ರೂಂನ್ನು ಉದ್ಘಾಟನೆ ಮಾಡಿದರು.

ಬೆಳ್ತಂಗಡಿ ಮುಖ್ಯ ಬೀದಿಯಲ್ಲಿ ಭವ್ಯ ಮೆರವಣಿಗೆಯೊಂದಿಗೆ ನಟ ರಮೇಶ್ ಅರವಿಂದ್ ಅವರನ್ನು ಅದ್ಧೂರಿಯಾಗಿ ಸ್ವಾಗತ ಮಾಡಲಾಗಿತ್ತು. ವಿಶೇಷವಾಗಿ ಹುಲಿ ಕುಣಿತ ಮುಳಿಯ ರಾಯಭಾರಿ ರಮೇಶ್ ಅವರನ್ನು ಬರಮಾಡಿಕೊಂಡಿತ್ತು. ರಮೇಶ್ ಅವರು ತುಳುನಾಡಿನ ಚೆಂಡೆಯನ್ನು ಬಡಿಯುವ ಮೂಲಕ ಮುಳಿಯ ಹೊಸ ಶೋ ರೂಂನ ವಿಸ್ಕೃತ ಮಳಿಗೆಯನ್ನು ಬೆಳ್ತಂಗಡಿ ಜನತೆಗೆ ಸಮರ್ಪಿಸಿದರು.